Asianet Suvarna News Asianet Suvarna News

ರಾಮ ಮಂದಿರ ರಾಜಕೀಯ ಪಕ್ಷಗಳಿಗೆ ದಾಳವಾಗಿತ್ತಾ..?

1528 ರಿಂದ 2020ರವರೆಗೆ ಅಯೋಧ್ಯೆಗ ಗ್ರಹಣ ಹಿಡಿದಿತ್ತು. ಇಂದು ಗ್ರಹಣ ಸರಿದಿದೆ. ಇಂದು ರಾಮ ಮಂದಿರಕ್ಕೆ ಮುಹೂರ್ತ ಕೂಡಿ ಬಂದಿದ್ದರಿಂದ  ಹಿಂದು ಸಮಾಜದವರು ವಿಜಯದಶಮಿಯ ಕೀರ್ತಿ ಪತಾಕೆಯನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಹಿಂದುಗಳು ಅಧಿಕಾರವನ್ನು ಕಳೆದುಕೊಂಡಾಗಲೆಲ್ಲ ದೇವಸ್ಥಾನಗಳನ್ನು ಕಳೆದುಕೊಂಡಿದ್ದಾರೆ. 2014ರಲ್ಲಿ 2019ರಲ್ಲಿ ನರೇಂದ್ರ ಮೋದಿ ಹಿಂದುಗಳ ಪ್ರತೀಕವಾಗಿ ಮತ್ತೆ ರಾಜ್ಯದ ಅಧಿಕಾರವನ್ನು ಮರು ಪಡೆದಾಗ ದೇವಸ್ಥಾನವನ್ನು ಮರು ಪಡೆದೆವು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
 
ಬೆಂಗಳೂರು(ಆ.05): ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಈ ಹಿಂದೆ ಬಿಜೆಪಿ ಪಕ್ಷ ನೀಡಿದ್ದ ಆಶ್ವಾಸನೆಯಂತೆ ಬಿಜೆಪಿ ಸರ್ಕಾರದ ಅಧಿಕಾರವಧಿಯಲ್ಲಿ ರಾಮ ಮಂದಿರಕ್ಕೆ ಅಡಿಗಲ್ಲು ಹಾಕಲಾಗಿದೆ.

1528 ರಿಂದ 2020ರವರೆಗೆ ಅಯೋಧ್ಯೆಗ ಗ್ರಹಣ ಹಿಡಿದಿತ್ತು. ಇಂದು ಗ್ರಹಣ ಸರಿದಿದೆ. ಇಂದು ರಾಮ ಮಂದಿರಕ್ಕೆ ಮುಹೂರ್ತ ಕೂಡಿ ಬಂದಿದ್ದರಿಂದ  ಹಿಂದು ಸಮಾಜದವರು ವಿಜಯದಶಮಿಯ ಕೀರ್ತಿ ಪತಾಕೆಯನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಹಿಂದುಗಳು ಅಧಿಕಾರವನ್ನು ಕಳೆದುಕೊಂಡಾಗಲೆಲ್ಲ ದೇವಸ್ಥಾನಗಳನ್ನು ಕಳೆದುಕೊಂಡಿದ್ದಾರೆ. 2014ರಲ್ಲಿ 2019ರಲ್ಲಿ ನರೇಂದ್ರ ಮೋದಿ ಹಿಂದುಗಳ ಪ್ರತೀಕವಾಗಿ ಮತ್ತೆ ರಾಜ್ಯದ ಅಧಿಕಾರವನ್ನು ಮರು ಪಡೆದಾಗ ದೇವಸ್ಥಾನವನ್ನು ಮರು ಪಡೆದೆವು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ದೇವನಗರಿಯಂತೆ ಕಂಗೊಳಿಸುತ್ತಿದೆ ಅಯೋಧ್ಯೆ; ಶತಮಾನಗಳ ಕನಸು ನನಸು

ಇದಕ್ಕೆ ಕಾಂಗ್ರೆಸ್ ವಕ್ತಾರ ನಾಗರಾಜ್ ನಾವೆಂದು ರಾಮ ಮಂದಿರ ವಿಚಾರದಲ್ಲಿ ರಾಜಕೀಯ ಮಾಡಿರಲಿಲ್ಲ. ರಾಮನ ಹೆಸರಿನಲ್ಲಿ ರಾಜಕೀಯ ಮಾಡಿದವರಿಗೆ ಶ್ರೀರಾಮ ಇನ್ನಾದರೂ ಬುದ್ದಿ ಕೊಡಲಿ ಎಂದಿದ್ದಾರೆ. ಈ ಮೇಲಿನ ಹೇಳಿಕೆಗಳು ಮತ್ತೊಮ್ಮೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಈ ಕುರಿತಾದ ವಿಶೇಷ ಚರ್ಚಾ ಕಾರ್ಯಕ್ರಮ ಇಲ್ಲಿದೆ.  

Video Top Stories