ಪಾಕ್ ಗಡಿಯಲ್ಲಿ ಶಾಂತಿ, ಮೆತ್ತಗಾದ ಇಮ್ರಾನ್ ಖಾನ್, ಹಿಂದಿದ್ದಾರೆ ಮಾಸ್ಟರ್ ಮೈಂಡ್ ಧೋವಲ್!
ಭಾರತ ಹಾಗೂ ಪಾಕಿಸ್ತಾನ ದಿಢೀರನೆ ಕದನ ವಿರಾಮ ಒಪ್ಪಂದ ಪಾಲಿಸುವ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದರ ಹಿಂದೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪಾತ್ರವಿದೆ ಎಂದು ತಿಳಿದು ಬಂದಿದೆ.
ನವದೆಹಲಿ (ಫೆ. 27): ಭಾರತ ಹಾಗೂ ಪಾಕಿಸ್ತಾನ ದಿಢೀರನೆ ಕದನ ವಿರಾಮ ಒಪ್ಪಂದ ಪಾಲಿಸುವ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದರ ಹಿಂದೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪಾತ್ರವಿದೆ ಎಂದು ತಿಳಿದು ಬಂದಿದೆ.
ಡಿಜೆ ಹಳ್ಳಿ ಗಲಭೆ : ಸಂಪತ್ ರಾಜ್‌ಗೆ ಕ್ಲೀನ್ ಚಿಟ್, ಅಖಂಡ ಅಸಮಾಧಾನ; ಕಾಂಗ್ರೆಸ್‌ನಲ್ಲಿ ಏನಾಗ್ತಿದೆ.?
ಗಡಿಯಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ದೋವಲ್ ಪಾಕಿಸ್ತಾನದೊಂದಿಗೆ ಈ ಕುರಿತು ಹಿಂಬಾಗಿಲ ಮಾತುಕತೆ ನಡೆಸಿದ್ದರು ಎಂದು ಹೇಳಲಾಗಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ರಾಷ್ಟ್ರೀಯ ಭದ್ರತೆ ಹಾಗೂ ವ್ಯೂಹಾತ್ಮಕ ನೀತಿ ನಿರೂಪಣೆ ವಿಚಾರಗಳಲ್ಲಿ ವಿಶೇಷ ಸಹಾಯಕರಾಗಿರುವ ಮೊಯೀದ್ ಡಬ್ಲು. ಯೂಸುಫ್ ಜತೆ ದೋವಲ್ ಅವರು ನೇರವಾಗಿ ಸಂಪರ್ಕದಲ್ಲಿದ್ದರು. ಮಧ್ಯವರ್ತಿಗಳ ಮುಖೇನವೂ ಮಾತುಕತೆ ನಡೆಸಿದ್ದರು. ಈ ವಿಚಾರದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸೇರಿದಂತೆ ಕೆಲವೇ ಮಂದಿಗೆ ಮಾತ್ರ ಗೊತ್ತಿತ್ತು ಎನ್ನಲಾಗಿದೆ.