Asianet Suvarna News Asianet Suvarna News

ಬಾಕಿ ಬಿಲ್ ಪಾವತಿಸಿ : ಮೋದಿ ಸರ್ಕಾರಕ್ಕೇ ಗಡುವು ನೀಡಿದ ಖಾಸಗಿ ಆಸ್ಪತ್ರೆಗಳು!

ಬಾಕಿ ಇರುವ ಬಿಲ್‌ಗಳನ್ನು ಮುಂದಿನ 15 ದಿನಗಳೊಳಗೆ ಪಾವತಿ ಮಾಡಬೇಕೆಂದು, ಫೋರ್ಟಿಸ್‌, ಮಾಕ್ಸ್, ಬೆಎಲ್‌ಕೆ, ಮೆಡಂಟಾ ಸೇರಿ ಪ್ರಮುಖ ಖಾಸಗಿ ಆಸ್ಪತ್ರೆಗಳು ಕೇಂದ್ರ ಸರ್ಕಾರಕ್ಕೆ ಗಡುವು ನೀಡಿವೆ. 

First Published Dec 24, 2019, 12:48 PM IST | Last Updated Dec 24, 2019, 12:48 PM IST

ನವದೆಹಲಿ(ಡಿ.24): ಬಾಕಿ ಇರುವ ಬಿಲ್‌ಗಳನ್ನು ಮುಂದಿನ 15 ದಿನಗಳೊಳಗೆ ಪಾವತಿ ಮಾಡಬೇಕೆಂದು, ಫೋರ್ಟಿಸ್‌, ಮಾಕ್ಸ್, ಬೆಎಲ್‌ಕೆ, ಮೆಡಂಟಾ ಸೇರಿ ಪ್ರಮುಖ ಖಾಸಗಿ ಆಸ್ಪತ್ರೆಗಳು ಕೇಂದ್ರ ಸರ್ಕಾರಕ್ಕೆ ಗಡುವು ನೀಡಿವೆ.  ಕೇಂದ್ರ ಸರ್ಕಾರದ ಆರೋಗ್ಯ ವಿಮಾ ಯೋಜನೆಗಳು, ಮಾಜಿ ಸೈನಿಕರಿಗೆ ಚಿಕಿತ್ಸಾ ಯೋಜನೆಗಳ ಬಾಕಿ ಮೊತ್ತ ಪಾವತಿಸುವಂತೆ ಆಸ್ಪತ್ರೆಗಳು ಸರ್ಕಾರಕ್ಕೆ ತಿಳಿಸಿದೆ. ಸರ್ಕಾರದಿಂದ ಖಾಸಗಿ ಆಸ್ಪತ್ರೆಗಳಿಗೆ ಸುಮಾರು 650 ಕೋಟಿ ರೂಪಾಯಿಯಷ್ಟು ಮೊತ್ತ ಪಾವತಿ ಮಾಡಲು ಬಾಕಿ ಇದ್ದು, ಇದನ್ನು ಶೀಘ್ರವೇ ಪಾವತಿಸುವಂತೆ ಆಸ್ಪತ್ರೆಗಳು ಕೇಳಿಕೊಂಡಿವೆ. ಕಳೆದ ತಿಂಗಳು ಬಾಕಿ ಇದ್ದ ಒಟ್ಟು 1700 ಕೋಟಿಯಲ್ಲಿ 1000 ಕೋಟಿಯನ್ನು ಸರ್ಕಾರ ಪಾವತಿ ಮಾಡಿತ್ತು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...
 

Video Top Stories