Asianet Suvarna News Asianet Suvarna News

ಚೀನಾ ವಿರುದ್ಧ ಯುದ್ಧಕ್ಕೆ ಭಾರತ ಸಜ್ಜು: ಡ್ರ್ಯಾಗನ್ ಬೆಚ್ಚಿ ಬೀಳುವಂತೆ ಸಿದ್ಧತೆ!

ಗಡಿಯಲ್ಲಿ ಚೀನಾ ಹಾಗೂ ಭಾರತ ನಡುವಿನ ಸಂಘರ್ಷದ ಬೆನ್ನಲ್ಲೇ ಶಾಂತಿ ಮಾತುಕತೆ ನಡೆದಿದೆಯಾದರೂ, ಚೀನಾ ಮಾತ್ರ ತನ್ನ ನರಿ ಬುದ್ಧಿ ಬಿಟ್ಟಿಲ್ಲ. ಸದ್ದಲ್ಲದೇ ಗಡಿ ಬಳಿ ಹೆಚ್ಚಿನ ಸೇನಾ ಸಿಬ್ಬಂದಿಯನ್ನು ಡ್ರ್ಯಾಗನ್ ನಿಯೋಜಿಸುತ್ತಿದೆ. ಹೀಗಿರುವಾಗ ಇತ್ತ ಭಾರತ ಕೂಡಾ ಯುದ್ಧಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿದೆ. ಭಾರತದ ಸಿದ್ಧತೆ ನೆರೆ ರಾಷ್ಟ್ರ ಚೀನಾವನ್ನೂ ಬೆಚ್ಚಿ ಬೀಳಿಸುವಂತಿದೆ.

 

ಲಡಾಖ್(ಜೂ.29): ಗಡಿಯಲ್ಲಿ ಚೀನಾ ಹಾಗೂ ಭಾರತ ನಡುವಿನ ಸಂಘರ್ಷದ ಬೆನ್ನಲ್ಲೇ ಶಾಂತಿ ಮಾತುಕತೆ ನಡೆದಿದೆಯಾದರೂ, ಚೀನಾ ಮಾತ್ರ ತನ್ನ ನರಿ ಬುದ್ಧಿ ಬಿಟ್ಟಿಲ್ಲ. ಸದ್ದಲ್ಲದೇ ಗಡಿ ಬಳಿ ಹೆಚ್ಚಿನ ಸೇನಾ ಸಿಬ್ಬಂದಿಯನ್ನು ಡ್ರ್ಯಾಗನ್ ನಿಯೋಜಿಸುತ್ತಿದೆ. ಹೀಗಿರುವಾಗ ಇತ್ತ ಭಾರತ ಕೂಡಾ ಯುದ್ಧಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿದೆ. ಭಾರತದ ಸಿದ್ಧತೆ ನೆರೆ ರಾಷ್ಟ್ರ ಚೀನಾವನ್ನೂ ಬೆಚ್ಚಿ ಬೀಳಿಸುವಂತಿದೆ.

ಹೌದು ಭಾರತ ಕಾಶ್ಮೀರ ಗಡಿ ಬಳಿ ಗ್ಯಾಸ್ ಸಿಲಿಂಡರ್‌ಗಳನ್ನು ರವಾನಿಸಿದೆ ಅಲ್ಲದೇ ಸೈನಿಕರಿಗೆ ಆಶ್ರಯಕ್ಕೆ ಬೇಕಾಗುವಂತಹ ಸಿದ್ಧತೆಗಳನ್ನೂ ನಡೆಸುಉತ್ತಿದೆ. ಈ ಮೂಲಕ ಯುದ್ಧ ಏರ್ಪಟ್ಟರೆ ಯಾವುದೇ ರೀತಿಯ ಕೊರತೆ ಎದುರಾಗದಂತೆ ಸಜ್ಜಾಗಿದೆ.

ಸೈನಿಕರ ಆಶ್ರಯಕ್ಕಾಗಿ ಶಾಲೆಯನ್ನು ಬಿಟ್ಟುಕೊಡಲು ಸರ್ಕಾರ ಸೂಚಿಸಿದೆ. ಹದಿನಾರು ಆಶಲೆಗಳನ್ನು ಬಿಟ್ಟುಕೊಡಲು ಕೇಂದ್ರ ಗೃಹ ಸಚಿವಾಲಯ ಜಿಲ್ಲಾಡಳಿತಕ್ಕೆ ಪತ್ರ ಬರೆದು ಸೂಚಿಸಿದೆ.