Asianet Suvarna News Asianet Suvarna News

Special 3 Circle: ನೀರೊಳಗೂ ಓಡುತ್ತೆ ಮೆಟ್ರೋ, ರೆಡಿಯಾಗ್ತಿದೆ ಹೊಸ ಪ್ಲಾನ್​!

ಕೊಲ್ಕತ್ತಾದಲ್ಲಿ  ಅಂಡರ್ ವಾಟರ್ ಮೆಟ್ರೋ ಯೋಜನೆ ಶೀಘ್ರವೇ ಜಾರಿಯಾಗಲಿದೆ. ಇದು ದೇಶದಲ್ಲಿ ಮೊದಲ ಪ್ರಯತ್ನವಾಗಿದ್ದು, ಈ ಸುರಂಗವು ಹೂಗ್ಲಿ ನದಿಯಲ್ಲಿ ನಿರ್ಮಾಣವಾಗಿದೆ.

ಕೊಲ್ಕತ್ತಾದಲ್ಲಿ ನೀರಿನೊಳಗೆ ಓಡಾಡುವ ಅಂಡರ್ ವಾಟರ್ ಮೆಟ್ರೋ ಯೋಜನೆ ಶೀಘ್ರವೇ ಜಾರಿಯಾಗಲಿದೆ. ಇದು ದೇಶದಲ್ಲಿ ಮೊದಲ ಪ್ರಯತ್ನವಾಗಿದ್ದು, ಈ ಸುರಂಗವು ಹೂಗ್ಲಿ ನದಿಯಲ್ಲಿ ನಿರ್ಮಾಣವಾಗಿದೆ. ಸುರಂಗ ಉದ್ದ 11 ಕಿಲೋಮೀಟರ್ (6.8 ಮೈಲಿ) ಮತ್ತು ಅಗಲ 5.5 ಮೀಟರ್ (18 ಅಡಿ). 520 ಮೀ ಉದ್ದದ  ನೀರಿನ ಒಳಗೆ ಸಂಚರಿಸುತ್ತಾ ಜಲಚರ ಪ್ರಾಣಿಗಳನ್ನು ನೋಡುತ್ತಾ ಇಲ್ಲಿ ಪ್ರಯಾಣ ಮಾಡಬಹುದು. 

ಮೆಟ್ರೋದಲ್ಲಿ ಯುವ ತರುಣ ಮಾಡಿದ ಒಂದೊಳ್ಳೆ ಕೆಲಸ ವೈರಲ್‌

ಸಮುದ್ರದಾಳದಲ್ಲಿ ಮತ್ಸ್ಯಕನ್ಯೆ ಇದ್ದಾರಾ? ಅಥವಾ ಅದು ನಮ್ಮ ಭ್ರಮೆಯಾ?  ನಮ್ಮ ಭೂಮಿಯಲ್ಲಿ ಲೆಕ್ಕಹಾಕೋದಕ್ಕೆ ಸಾಧ್ಯವಿಲ್ಲದಷ್ಟು ಜೀವ ಪ್ರಕಾರಗಳಿವೆ. ನೀರಿನಲ್ಲಿ ಅದೆಷ್ಟೋ ಜಲಚರಗಳಿವೆ. ಇನ್ನು ಸಮುದ್ರದ ಆಳದಲ್ಲಿ ಮತ್ಸ್ಯ ಮಾನವರು ಇದ್ದಾರೆ ಎಂಬ ಕಲ್ಪನೆ ಇದೆ. ನಿಜವಾಗಿ ಇದ್ದಾರಾ ಎಂಬುದಕ್ಕೆ ಉತ್ತರ ಇಲ್ಲ. ಆದರೆ ಸಿನೆಮಾಗಳಲ್ಲಿ, ಕಥೆಗಳಲ್ಲಿ ಈ ಸನ್ನಿವೇಶ ಬಂದು ಹೋಗುತ್ತೆ. ಆದರೆ ಇದೀಗ ಮನುಷ್ಯ ಸಮುದ್ರದಾಳದಲ್ಲಿ ಪ್ರಪಂಚ ಕಟ್ಟಿಕೊಳ್ಳಲು ತಯಾರಿ ನಡೆಸುತ್ತಿದ್ದಾನೆ. ಮತ್ಸ್ಯ ಮಾನವರಂತೆ ಆಗದಿದ್ದರೂ ಮನುಷ್ಯನಾಗಿಯೇ ಜೀವನ ರೂಪಿಸಿಕೊಳ್ಳಲು ಮುಂದಾಗಿದ್ದಾನೆ. ನೀರಿನಾಳದಲ್ಲಿ ರೈಲ್ವೇ , ರೆಸಾರ್ಟ್ ಅಂತ ಊರನ್ನು ಕಟ್ಟಿಕೊಳ್ಳಲು ಮುಂದಾಗಿದ್ದಾನೆ. ಮನುಷ್ಯ ಮೊದಲೇ ಸ್ವಾರ್ಥಿ. ಈಗಾಗಲೇ ಕಾಡನ್ನು ಸರ್ವನಾಶವಾಗಿದೆ. ಇದೀಗ  ನೀರಿನಾಳದ ಬದುಕಿಗೆ ಜಲಚರಗಳ ಮಾರಣಹೋಮವಂತು ಪಕ್ಕಾ.