Asianet Suvarna News Asianet Suvarna News

ವಾರ್ನಿಂಗ್ ಮೇಲೆ ವಾರ್ನಿಂಗ್ ಕೊಟ್ಟವರೆಲ್ಲ.. ಭಾರತಕ್ಕೆ ಜೈ ಎಂದಿದ್ದೇಕೆ?

ಭಾರತದ ನಿಲುವು ಇಷ್ಟವಿಲ್ಲದಿದ್ದರೂ ತಲೆ ಬಾಗಿದ್ದೇಕೆ ಗೊತ್ತಾ ಆ ದೇಶಗಳು? ವಾರ್ನಿಂಗ್ ಮೇಲೆ ವಾರ್ನಿಂಗ್ ಕೊಟ್ಟವರೆಲ್ಲ.. ಭಾರತಕ್ಕೆ ಜೈ ಎಂದಿದ್ದೇಕೆ?

ನವದೆಹಲಿ(ಏ.25): ನ್ಯಾಟೋ ರಾಷ್ಟ್ರಗಳಿಗಿಂತ ವಿಶ್ವ ಸಂಸ್ಥೆಗೆ ಈಗ ಭಾರತವೇ ಪವರ್‌ಫುಲ್ ಅನ್ನೋ ಹಾಗೆ ಕಾಣಿಸುತ್ತಿದೆ. ಕಳೆದೊಂದು ತಿಂಗಳ ಅಂತರದಲ್ಲಿ ಭಾರತಕ್ಕೆ ಬಂದು ಹೋಗಿದ್ದೆಷ್ಟು ದೇಶ ಎಂದು ಗೊತ್ತಾದರೆ ಉತ್ತರ ನಿಮಗೇ ಸಿಗುತ್ತದೆ. ಭಾರತದ ನಿಲುವು ಇಷ್ಟವಿಲ್ಲದಿದ್ದರೂ ತಲೆ ಬಾಗಿದ್ದೇಕೆ ಗೊತ್ತಾ ಆ ದೇಶಗಳು? ವಾರ್ನಿಂಗ್ ಮೇಲೆ ವಾರ್ನಿಂಗ್ ಕೊಟ್ಟವರೆಲ್ಲ.. ಭಾರತಕ್ಕೆ ಜೈ ಎಂದಿದ್ದೇಕೆ?

ಹೌದು ಬರೋಬ್ಬರಿ ಎರಡು ತಿಂಗಳಿನಿಂದ ರಷ್ಯಾ ಹಾಗೂ ಉಕ್ರೇನ್ ಯುದ್ಧ ನಡೆಯುತ್ತಿದೆ. ಇಬ್ಬರ ಯುದ್ಧ ಮುಗಿಯುತ್ತಿಲ್ಲ, ಮಾತುಕತೆ ಫಲ ನೀಡುತ್ತಿಲ್ಲ. ಮಾತುಕತೆ, ಸಂದೇಶ ಯಾವುದೂ ಸಫಲವಾಗುತ್ತಿಲ್ಲ. ಆದರೆ ಉಕ್ರೇನ್ ಮಾತ್ರ ನಿಧಾನವಾಗಿ ನಾಶವಾಗುತ್ತಿದೆ. ಹೀಗಿರುವಾಗ ಉಭಯ ರಾಷ್ಟ್ರದ ನಾಯಕರು ಮಾತುಕತೆ ಮೂಲಕ ಶಾಂತಿ ಸ್ಥಾಪನೆ ಮಾಡಲು ಮುಂದಾಗಿದ್ದರು. ಆದರೆ ಈ ಇಬ್ಬರು ನಾಯಕರನ್ನು ಈ ನಿರ್ಧಾರ ಕೈಗೊಳ್ಳುವಂತೆ ಮಾಡಿದ್ದು ವಿಶ್ವದ ಯಾವುದೇ ದೊಡ್ಡ ರಾಷ್ಟ್ರಗಳಲ್ಲ, ಬದಲಾಗಿ ಭಾರತ