Asianet Suvarna News Asianet Suvarna News

ಫೆ.26: ಬಾಲಾಕೋಟ್ ಉಗ್ರರ ನೆಲೆ ಧ್ವಂಸಗೊಳಿಸಿ ಪ್ರತೀಕಾರ ತೀರಿಸಿದ ವಿಶೇಷ ದಿನ!

ಪುಲ್ವಾಮಾ ದಾಳಿಯ ಭೀಕರತೆ, ನೋವು ಭಾರತೀಯರು ಯಾರೂ ಮರೆಯಲು ಸಾಧ್ಯವಿಲ್ಲ. 40 CRPF ಯೋಧರು ಹುತಾತ್ಮರಾದ ಈ ದಾಳಿಗೆ ಪ್ರತೀಕಾರ ತೀರಿಸಲು ಭಾರತ ಕೂಡ ಸಜ್ಜಾಗಿದೆ. ಹೀಗಾಗಿ ಪುಲ್ವಾಮಾ ದಾಳಿಯ 12 ದಿನದ ಬಳಿಕ ಭಾರತೀಯ ವಾಯುಸೇನೆ ಫೈಟರ್ ಏರ್‌ಕ್ರಾಫ್ಟ್ ಮೂಲಕ ಬಾಂಬ್ ದಾಳಿ ನಡೆಸಿತು. 

Feb 27, 2021, 7:32 PM IST

ಪುಲ್ವಾಮಾ ದಾಳಿಯ ಭೀಕರತೆ, ನೋವು ಭಾರತೀಯರು ಯಾರೂ ಮರೆಯಲು ಸಾಧ್ಯವಿಲ್ಲ. 40 CRPF ಯೋಧರು ಹುತಾತ್ಮರಾದ ಈ ದಾಳಿಗೆ ಪ್ರತೀಕಾರ ತೀರಿಸಲು ಭಾರತ ಕೂಡ ಸಜ್ಜಾಗಿದೆ. ಹೀಗಾಗಿ ಪುಲ್ವಾಮಾ ದಾಳಿಯ 12 ದಿನದ ಬಳಿಕ ಭಾರತೀಯ ವಾಯುಸೇನೆ ಫೈಟರ್ ಏರ್‌ಕ್ರಾಫ್ಟ್ ಮೂಲಕ ಬಾಂಬ್ ದಾಳಿ ನಡೆಸಿತು. 

ಫೆಬ್ರವರಿ 26, 2019ರಲ್ಲಿ ಭಾರತದ ಗಡಿ ದಾಟಿ, ಪಾಕಿಸ್ತಾನ ಆಕ್ರಮಿತ ಪ್ರದೇಶಕ್ಕೆ ಲಗ್ಗೆ ಇಟ್ಟ ಭಾರತ ಬಾಲಕೋಟ್ ಬಳಿ ಇದ್ದ ಉಗ್ರರ ನೆಲೆಯನ್ನು ಧ್ವಂಸಗೊಳಿಸಿತು. ಬಾಲಾಕೋಟ್ ಕಾರ್ಯಚರಣೆ ಸ್ಕ್ವಾಡ್ರನ್ ಗೌರವಿಸುವ ನಿಟ್ಟಿನಲ್ಲಿ ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಬದೌರಿಯಾ ಈ ವಿಶೇಷ ದಿನವನ್ನೂ ನೆನಪಿಸಿಕೊಂಡಿದ್ದಾರೆ.

1971ರ ಭಾರತ -ಪಾಕಿಸ್ತಾನ ಯುದ್ಧದ ಬಳಿಕ ಭಾರತ ಇದೇ ಮೊದಲ ಬಾರಿಗೆ ಏರ್‌ಸ್ಟ್ರೈಕ್ ನಡೆಸಿತ್ತು. ಫೆಬ್ರವರಿ 26 ರಂದು ಬೆಳಗ್ಗೆ ಪಾಕಿಸ್ತಾನ ಸೇನೆ, ಭಾರತದ ಏರ್‌ಸ್ಟ್ರೈಕ್ ಖಚಿತಪಡಿಸಿತ್ತು. ಇನ್ನು ಫೆಬ್ರವರಿ 27 ರಂದು ಪಾಕಿಸ್ತಾನ ಪ್ರತಿದಾಳಿ ನಡೆಸಿತು.