ನಿಲ್ಲದ ಮಳೆ ಆರ್ಭಟ, ಕುಸಿಯುತ್ತಿವೆ ಮನೆಗಳು, ಕೊಚ್ಚಿ ಹೋದ ರಸ್ತೆಗಳು, ನಿಂತಲ್ಲೇ ಕುಸಿಯುತ್ತಿದೆ ಭೂಮಿ
ದೇಶಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು. ಎಲ್ಲೆಲ್ಲೂ ಪ್ರವಾಹದ ಭೀತಿ ನಿರ್ಮಾಣವಾಗಿದೆ. ಕಂಡು ಕೇಳರಿಯದ ಮಳೆಗೆ ಆಂಧ್ರ ಪ್ರದೇಶ ಸಾಕ್ಷಿಯಾಗಿದೆ. ಮನೆಗಳು ಕುಸಿದು ಬೀಳುತ್ತಿವೆ. ಕುರುಹುಗಳು ಸಿಗುತ್ತಿಲ್ಲ. ರಸ್ತೆಗಳು ಹೊಳೆಗಳಾಗಿವೆ.
ಬೆಂಗಳೂರು (ಅ. 15): ದೇಶಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು. ಎಲ್ಲೆಲ್ಲೂ ಪ್ರವಾಹದ ಭೀತಿ ನಿರ್ಮಾಣವಾಗಿದೆ. ಕಂಡು ಕೇಳರಿಯದ ಮಳೆಗೆ ಆಂಧ್ರ ಪ್ರದೇಶ ಸಾಕ್ಷಿಯಾಗಿದೆ. ಮನೆಗಳು ಕುಸಿದು ಬೀಳುತ್ತಿವೆ. ಕುರುಹುಗಳು ಸಿಗುತ್ತಿಲ್ಲ. ರಸ್ತೆಗಳು ಹೊಳೆಗಳಾಗಿವೆ. ಜನ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದರೂ ತಡೆಯಲಾರದ ಅಸಹಾಯಕತೆ ಎದುರಾಗಿದೆ.
ಮಳೆಯಿಂದ ಪ್ರವಾಹ, ಆಸ್ಪತ್ರೆಗೆ ಹೋಗಲಾಗದೇ ಶಾಲೆಯಲ್ಲೇ ಹೆರಿಗೆ ಮಾಡಿಸಿದ ವೃದ್ದೆ!
ಇನ್ನು ರಾಜ್ಯದ ಮಟ್ಟಿಗೆ ಹೇಳುವುದಾದರೆ ಬಹುತೇಕ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಡ್ಯಾಂಗಳು ತುಂಬಿವೆ. ಹೊಲಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ರೈತ ಕಣ್ಣೀರಿಡುತ್ತಿದ್ದಾನೆ. ಎಲ್ಲೆಲ್ಲಿ ಏನೇನು ಅನಾಹುತವಾಗಿದೆ? ನೋಡೋಣ ಬನ್ನಿ..!