Asianet Suvarna News Asianet Suvarna News

ಎಗ್ಗಿಲ್ಲದೆ ಸುರಿದ ಮಳೆಗೆ, ಉಕ್ಕಿದ ವಿಶ್ವಾಮಿತ್ರಿ ನದಿ: ಅಸ್ನಾಸುರನ ಆರ್ಭಟಕ್ಕೆ ಗುಜರಾತ್ ತತ್ತರ

ಗುಜರಾತಿನಲ್ಲಿ ಬಿಟ್ಟೂಬಿಡದೇ ಸುರಿಯುತ್ತಿರೋ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ.. ಈಗಾಗಲೇ ಕನಿಷ್ಠ 36 ಜೀವಗಳನ್ನ ಈ ಪ್ರವಾಹ ಬಲಿ ಪಡೆದಿದೆ.  ವಿಶ್ವಾಮಿತ್ರಿ ನದಿ ಹುಚ್ಚೆದು ಉಕ್ಕಿ ಹರಿದಿದ್ದು, ಅನೇಕರು ತಮ್ಮ ಆಶ್ರಯ ತಾಣಗಳನ್ನು ಕಳೆದುಕೊಂಡಿದ್ದಾರೆ. 

First Published Sep 1, 2024, 11:58 AM IST | Last Updated Sep 1, 2024, 11:58 AM IST

ಗುಜರಾತ್‌ನಲ್ಲಿ ಅರ್ಧಕ್ಕರ್ಧ ರಾಜ್ಯವನ್ನೇ ಗುಳುಂ ಮಾಡಿದೆ ಪ್ರಚಂಡ ಚಂಡ ಮಾರುತ. 20 ವರ್ಷಗಳ ಬಳಿಕ ಬಂದ ಕಂಡು ಕೇಳರಿಯದ ಪ್ರವಾಹಕ್ಕೆ 30 ಕ್ಕೂ ಅಧಿಕ ಜನ ಬಲಿಯಾಗಿದ್ದಾರೆ. 15ಕ್ಕೂ ಹೆಚ್ಚು ನದಿಗಳು ಹುಚ್ಚೆದ್ದು ಉಕ್ಕಿ ಹರಿದಿದ್ದು, ಪ್ರವಾಹ ಜಲದಲ್ಲಿ ಮೊಸಳೆಗಳು ನುಗ್ಗಿ ಬಂದು ಮನೆಗಳಲ್ಲಿ ಆಶ್ರಯ ಪಡೆದಿವೆ. ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಿರುವುದು ಅಸ್ನಾ ಚಂಡಮಾರುತ, ಇದರಿಂದ ಕಚ್,ದ್ವಾರಕಾ, ಜಾಮ್ನಗರ್, ಮೊರ್ಬಿ, ಸುರೆಂದ್ರನಗರ್, ರಾಜ್ ಕೋಟ್, ಪೋರ್ ಬಂದರ್, ಜನಾಗಢ್, ಗಿರ್ ಸೋಮನಾಥ್, ಅಮ್ರೇಲಿ, ಭಾವ್ನಗರ್, ಬೊಟದ್‌  ಈ 12 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ.. ಜನರನ್ನ ರಕ್ಷಿಸೋಕೆ ಅವಿರತ ಹೋರಾಟವೇ ನಡೀತಿದೆ. ಈ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ. 

Video Top Stories