5ನೇ ಹಂತದ ಲಾಕ್‌ಡೌನ್ ಇರುತ್ತಾ? ಇರಲ್ವಾ?
ನಾಲ್ಕನೇ ಹಂತದ ಲಾಕ್‌ಡೌನ್ ಬಳಿಕ 5ನೇ ಹಂತದ ಲಾಕ್‌ಡೌನ್ ಇರುತ್ತದೆಯೋ ಇಲ್ಲವೋ ಎನ್ನುವ ಕುತೂಹಲ ಜೋರಾಗಿದೆ. ಆದರೆ ಲಾಕ್‌ಡೌನ್ 5.O ಸ್ವರೂಪ ಹೇಗಿರಲಿದೆ ಎನ್ನುವುದು ಇನ್ನು ತೀರ್ಮಾನವಾಗಿಲ್ಲ.
ಬೆಂಗಳೂರು(ಮೇ.27): ಎಲ್ಲರ ಕಣ್ಣು ಈಗ ಮೇ 31 ರ ನಂತರ ಮುಂದೇನು? ಲಾಕ್ ಡೌನ್ 4 ಕ್ಕೆ ಮಂಗಳ ಹಾಡಿ ಜನಜೀವನ ಪುನಃ ಎಂದಿನಂತೆ ಶುರುವಾಗತ್ತಾ ಅಥವಾ ಲಾಕ್ ಡೌನ್ 5 ಜಾರಿಗೆ ಬರತ್ತಾ? ಬರುವುದೇ ಆದರೆ ಅದರ ಸ್ವರೂಪ ಹೇಗಿರುತ್ತದೆ? ಈ ಕುರಿತಂತೆ ಸಾಕಷ್ಟು ಊಹಾಪೋಹಗಳಿವೆ.
ಹೋಟೆಲುಗಳು, ಮಾಲುಗಳು ಮತ್ತೆ ಬಾಗಿಲು ತೆರೆದು ವ್ಯಾಪಾರ ವಹಿವಾಟು ನಡೆಸಲು ತುದಿಗಾಲಲ್ಲಿ ನಿಂತಿವೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಭರವಸೆಯನ್ನೇನೋ ಕೊಟ್ಟಿದ್ದಾರೆ, ನಿಜ. ಆದರೆ ಅದಕ್ಕೆ ಕೇಂದ್ರದ ಸಮ್ಮತಿ ಬೇಕು. ಪ್ರಧಾನಿ ಮೋದಿ ಏನು ಹೇಳುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಭಾನುವಾರದ ಮನ್ ಕಿ ಬಾತ್ ನಲ್ಲಿ ಏನು ಸೂಚನೆ ಕೊಡುತ್ತಾರೆ ಎಂದು ಕಾದು ನೋಡುತ್ತಿದೆ, ಕರ್ನಾಟಕ. ಅಥವಾ ಅದಕ್ಕೂ ಮುಂಚೆಯೇ ಮೋದಿ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದರೂ ಮಾಡಬಹುದು.
ರಾಜ್ಯದ 10 ಜಿಲ್ಲೆಗಳಲ್ಲಿ ಸೆಂಚುರಿ ಬಾರಿಸಿದ ಕೊರೋನಾ
ಈ ಎಲ್ಲದರ ನಡುವೆ ಲಾಕ್ ಡೌನ್ 5 ರಬಗ್ಗೆ ಎದ್ದಿರುವ ಎಲ್ಲ ಪುಕಾರುಗಳನ್ನು ಕೇಂದ್ರ ಸರಕಾರ ಒಂದು ಸಾಲಿನ ಟ್ವೀಟ್ ಮೂಲಕ ತಳ್ಳಿಹಾಕಿದೆ ಎನ್ನುವುದು ನಿಮಗೆ ನೆನಪಿರಲಿ. ಅಧಿಕೃತ ಮಾಹಿತಿಗೆ ಮನೆಯಲ್ಲಿಯೇ ಕುಳಿತು ಕಾಯುವುದಷ್ಟೇ ನಾವು ನೀವು ಮಾಡಬೇಕಾದ ಕೆಲಸ