ಮೋದಿ ಗತ್ತು, ಭಾರತ ಮಣ್ಣಿನ ತಾಕತ್ತು, ಸ್ವದೇಶಿ ಗಮ್ಮತ್ತು..!
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ವಾವಲಂಬಿ ಭಾರತವನ್ನು ಸಾಕಾರಗೊಳಿಸಲು ಮತ್ತಷ್ಟು ಮಹತ್ವದ ಸುಧಾರಣೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಐತಿಹಾಸಿಕ ಸುಧಾರಣೆ ಘೋಷಿಸಿದ್ದ ಅವರು ಕಲ್ಲಿದ್ದಲು, ವಿಮಾನಯಾನ, ರಕ್ಷಣೆ, ಬಾಹ್ಯಾಕಾಶದಲ್ಲಿ ಕ್ರಾಂತಿಕಾರಿ ಕ್ರಮಗಳನ್ನು ಪ್ರಕಟಿಸಿದ್ದಾರೆ.
ಬೆಂಗಳೂರು (ಮೇ. 17): ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ವಾವಲಂಬಿ ಭಾರತವನ್ನು ಸಾಕಾರಗೊಳಿಸಲು ಮತ್ತಷ್ಟು ಮಹತ್ವದ ಸುಧಾರಣೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಐತಿಹಾಸಿಕ ಸುಧಾರಣೆ ಘೋಷಿಸಿದ್ದ ಅವರು ಕಲ್ಲಿದ್ದಲು, ವಿಮಾನಯಾನ, ರಕ್ಷಣೆ, ಬಾಹ್ಯಾಕಾಶದಲ್ಲಿ ಕ್ರಾಂತಿಕಾರಿ ಕ್ರಮಗಳನ್ನು ಪ್ರಕಟಿಸಿದ್ದಾರೆ.
ಆರ್ಥಿಕ ಪ್ಯಾಕೇಜ್ 4ನೇ ಕಂತು; ಕಲ್ಲಿದಲ್ಲು, ವಿದ್ಯುತ್ ಕ್ಷೇತ್ರ ಖಾಸಗೀಕರಣಕ್ಕೆ ನಿರ್ಧಾರ!
ಖಾಸಗಿ ವಲಯದವರೂ ವಾಣಿಜ್ಯಿಕ ಉದ್ದೇಶಕ್ಕೆ ಕಲ್ಲಿದ್ದಲು ಗಣಿಗಾರಿಕೆ ನಡೆಸಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಪ್ರತಿ ಟನ್‌ಗೆ ಇಂತಿಷ್ಟುಎಂದು ಹಣವನ್ನು ನಿಗದಿಪಡಿಸುವ ಬದಲು ಆದಾಯ ಹಂಚಿಕೆ ವ್ಯವಸ್ಥೆಯ ಮೇಲೆ ವಾಣಿಜ್ಯಿಕ ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತದೆ. ಸುಮಾರು 50 ಕಲ್ಲಿದ್ದಲು ನಿಕ್ಷೇಪಗಳನ್ನು ಬಿಡ್ಡಿಂಗ್ ಮೂಲಕ ಖಾಸಗಿ ವಲಯಕ್ಕೆ ಹಂಚಿಕೆ ಮಾಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರಿಂದ ಕಲ್ಲಿದ್ದಲು ಗಣಿಗಳ ಮೇಲೆ ಸರ್ಕಾರದ ಸರ್ವಾಧಿಪತ್ಯ ಅಂತ್ಯಗೊಳ್ಳಲಿದೆ.