ರಾಕೇಶ್ ಟಿಕಾಯತ್ ಕಣ್ಣೀರಿಗೆ ಕರಗಿದ್ದೇಕೆ ಅನ್ನದಾತ..?
ಗಾಜಿಪುರ ಪ್ರತಿಭಟನಾ ಸ್ಥಳದಿಂದ ರೈತರನ್ನು ತೆರವುಗೊಳಿಸುವ ಉತ್ತರಪ್ರದೇಶ ಸರ್ಕಾರದ ಯತ್ನಕ್ಕೆ ಭಾರೀ ಹಿನ್ನೆಡೆಯಾಗಿದೆ. ಸ್ಥಳದಲ್ಲಿದ್ದ ರೈತರು ಅಲ್ಲಿಂದ ತೆರವಾಗುವುದರ ಬದಲು, ಅಲ್ಲಿಗೆ ಮತ್ತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
ನವದೆಹಲಿ (ಜ. 30): ಗಾಜಿಪುರ ಪ್ರತಿಭಟನಾ ಸ್ಥಳದಿಂದ ರೈತರನ್ನು ತೆರವುಗೊಳಿಸುವ ಉತ್ತರಪ್ರದೇಶ ಸರ್ಕಾರದ ಯತ್ನಕ್ಕೆ ಭಾರೀ ಹಿನ್ನೆಡೆಯಾಗಿದೆ. ಸ್ಥಳದಲ್ಲಿದ್ದ ರೈತರು ಅಲ್ಲಿಂದ ತೆರವಾಗುವುದರ ಬದಲು, ಅಲ್ಲಿಗೆ ಮತ್ತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
ಸಿಂಘೂ ಗಡಿಯಲ್ಲಿ ಸಂಘರ್ಷ : ದಾರಿ ತಪ್ಪಿತಾ ರೈತ ಹೋರಾಟ..?
ಸ್ಥಳದಿಂದ ತೆರಳುವಂತೆ ರೈತರಿಗೆ ಯುಪಿ ಸರ್ಕಾರ ಸೂಚನೆ ನೀಡಿತ್ತು. ಜೊತೆಗೆ ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿತ್ತು. ಆದರೆ ಸ್ಥಳಬಿಟ್ಟು ಕದಲಲು ರೈತರು ನಿರಾಕರಿಸಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಮತ್ತು ಹರಾರಯಣದಿಂದಲೂ ಸಾವಿರಾರು ಸಂಖ್ಯೆಯಲ್ಲಿ ರೈತರು ಸ್ಥಳಕ್ಕೆ ಆಗಮಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಡುವೆ ಗಾಜಿಪುರ ಹೋರಾಟದ ನೇತೃತ್ವ ವಹಿಸಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಸರ್ಕಾರದ ವಿರುದ್ಧ ಮಾಡಿದ್ದ ಕಣ್ಣೀರಿನ ಭಾಷಣದ ವಿಡಿಯೋ ಭಾರೀ ವೈರಲ್ ಆಗಿದೆ.