101 ರೈತ ಸಂಘಟನೆಗಳಿಂದ ದಿಲ್ಲಿ ಚಲೋ, ಮೋದಿ ಸರ್ಕಾರಕ್ಕೆ 101 ತಲೆನೋವು!
ರೈತ ಪ್ರತಿಭಟನೆ ಕಾವು ಜೋರಾಗಿದೆ. ರೈತ ಸಂಘಟನೆಗಳು ದಿಲ್ಲಿಯತ್ತ ನುಗ್ಗುತ್ತಿದೆ.ಪೊಲೀಸರ ಜೊತೆ ಘರ್ಷಣೆ ತೀವ್ರಗೊಂಡಿದೆ. ಈ ಬಾರಿ ರೈತರ ಬೇಡಿಕೆ ಏನು? ದೆಹಲಿ ತಲುಪುತ್ತಾ ಪ್ರತಿಭಟನಾ ಮೆರವಣಿಗೆ?
ದೆಹಲಿ-ಹರಿಯಾಣ ಗಡಿಯಲ್ಲಿ ಮತ್ತೆ ರೈತ ಪ್ರತಿಭಟನೆ ಕಾವು ಪಡೆದಿದೆ. 101 ರೈತ ಸಂಘಟನೆಗಳು ದಿಲ್ಲಿ ಚಲೋ ಆರಂಭಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿ ಶಂಭು ಗಡಿ ತಲುಪುತ್ತಿದ್ದಂತೆ ಪೊಲೀಸರ ಜೊತೆ ಘರ್ಷಣೆಗಳು ಶುರುವಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಆಶ್ರುವಾಯು ಸಿಡಿಸಿದ್ದಾರೆ. ಇದರಿಂದ 9 ರೈತರು ಗಾಯಗೊಂಡಿದ್ದಾರೆ. ಸದ್ಯ ರೈತ ಪ್ರತಿಭಟನೆ ಕಾವು ಜೋರಾಗಿದೆ.