ನೂತನ ಕೃಷಿ ಕಾಯ್ದೆ : ರೈತನಿಗೆ ವರವೋ? ಶಾಪವೋ? ಮೋದಿ ಕೊಟ್ಟ ಅಭಯವಿದು..!
ನರೇಂದ್ರ ಮೋದಿ ಆಡಳಿತದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಅನ್ನದಾತ ರೊಚ್ಚಿಗೆದ್ದಿದ್ದಾನೆ. ಬೀದಿಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೋದಿ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಯ ಬಗ್ಗೆ ದೇಶಾದ್ಯಂತ ಪರ- ವಿರೋಧ ಚರ್ಚೆಯಾಗುತ್ತಿದೆ.
ಬೆಂಗಳೂರು (ಡಿ. 09): ನರೇಂದ್ರ ಮೋದಿ ಆಡಳಿತದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಅನ್ನದಾತ ರೊಚ್ಚಿಗೆದ್ದಿದ್ದಾನೆ. ಬೀದಿಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೋದಿ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಯ ಬಗ್ಗೆ ದೇಶಾದ್ಯಂತ ಪರ- ವಿರೋಧ ಚರ್ಚೆಯಾಗುತ್ತಿದೆ. ಇದರಲ್ಲಿ ರೈತರ ಹಿತಕಾಯಲೆಂದೇ ಈ ಕಾಯ್ದೆಯನ್ನು ತರಲಾಗಿದೆಯೇ ಹೊರತು ಇದರಲ್ಲಿ ರೈತನ ಕೈ ಕಟ್ಟಿ ಹಾಕುವಂತದ್ದೇನೂ ಇಲ್ಲ ಎಂದು ಪ್ರಧಾನಿ ಮೋದಿ ಎದೆತಟ್ಟಿ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಧ್ಯರಾತ್ರಿ ಭೇಟಿ ಬಿಚ್ಚಿಟ್ಟ ಕುಮಾರಸ್ವಾಮಿ..!
ನೂತನ ಕೃಷಿ ಕಾಯ್ದೆ ಬಗ್ಗೆ ಪ್ರಧಾನಿ ಮೋದಿ ಸವಿಸ್ತಾರವಾಗಿ ಹೇಳಿದರೂ, ರೈತರು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸ್ತಿರೋದ್ಯಾಕೆ? ನಿಜಕ್ಕೂ ಈ ಕೃಷಿ ಕಾಯ್ದೆ ರೈತರಿಗೆ ಮರಣ ಶಾಸನವಾ? ಮೋದಿ ಹೇಳಿದ ಹಾಗೆ ರೈತರ ಹಿತಾಸಕ್ತಿ ಕಾಪಾಡುತ್ತಾ? ರೈತರ ಪ್ರಶ್ನೆಗಳಿಗೆ ಮೋದಿ ಕೊಟ್ಟ ಸ್ಷಷ್ಟನೆ ಏನು? ನೋಡೋಣ ಬನ್ನಿ...!