Asianet Suvarna News Asianet Suvarna News

ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ ಚುನಾವಣಾ ಪ್ರಚಾರದ ಮೇಲೆ ನಿಷೇಧ!

ಮಹತ್ವದ ಬೆಳವಣಿಗೆಯೊಂದರಲ್ಲಿ ಚುನಾವಣಾ ಆಯೋಗ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹಾಗೂ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರಿಗೆ ತಲಾ ಮೂರು ಮತ್ತು ನಾಲ್ಕು ದಿನಗಳ ಕಾಲ ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರದ ಮೇಲೆ ನಿಷೇಧ ಹೇರಿದೆ.

ನವದೆಹಲಿ(ಜ.30): ಮಹತ್ವದ ಬೆಳವಣಿಗೆಯೊಂದರಲ್ಲಿ ಚುನಾವಣಾ ಆಯೋಗ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹಾಗೂ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರಿಗೆ ತಲಾ ಮೂರು ಮತ್ತು ನಾಲ್ಕು ದಿನಗಳ ಕಾಲ ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರದ ಮೇಲೆ ನಿಷೇಧ ಹೇರಿದೆ.

ಸಿಎಎ ವಿರೋಧಿ ಹೋರಾಟಗಾರರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಇಬ್ಬರೂ ನಾಯಕರ ಪ್ರಚಾರದ ಮೇಲೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ.

ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಅನುರಾಗ್, ಪರ್ವೇಶ್ ಔಟ್!

ಆಯೋಗ ಜಾರಿಗೊಳಿಸಿದ್ದ ಶೋಖಾಸ್ ನೋಟೀಸ್‌ಗಳಿಗೆ ಬಿಜೆಪಿ ಮುಖಂಡರು ನೀಡಿರುವ ಉತ್ತರ ಸಮಾಧಾನಕರವಾಗಿಲ್ಲ ಎಂದಿರುವ ಚುನಾವಣಾ ಆಯೋಗ, ಇಬ್ಬರೂ ನಾಯಕರ ಚುನಾವಣಾ ಪ್ರಚಾರದ ಮೇಲೆ ನಿರ್ಬಂಧ ವಿಧಿಸಿದೆ ಎನ್ನಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...