ಡ್ರೋನ್ ದಾಳಿ: ಗಡಿಗಿಂತ ಹೆಚ್ಚು ದೇಶದೊಳಗಿನ ಸೂಕ್ಷ್ಮ ಪ್ರದೇಶಗಳಿಗೆ ಅಪಾಯ!

ಕಳೆದ ಕೆಲ ದಿನಗಳ ಹಿಂದೆ ಕಣಿವೆ ನಾಡು ಜಮ್ಮುವಿನಲ್ಲಿ ನಡೆದ ಡ್ರೋನ್ ದಾಳಿ ಹಾಗೂ ಬಳಿಕ ಅನುಮಾನಾಸ್ಪದವಾಗಿ ಹಾರಾಟ ನಡೆಸುತ್ತಿದ್ದ ಡ್ರೋನ್‌ಗಳು ದೇಶಾದ್ಯಂತ ಭಾರೀ ಆತಂಕ ಸೃಷ್ಟಿಸಿದ್ದವು. ಉಗ್ರರ ಈ ಹೊಸ ಆಟಕ್ಕೆ ಭಾರತವೂ ಒಂದು ಕ್ಷಣ ವಿಚಲಿತಗೊಂಡಿತ್ತು. ಆದರೆ ಮರುಕ್ಷಣವೇ ಈ ಡ್ರೋನ್‌ಗಳನ್ನು ಹೊಡೆದಟ್ಟುವಲ್ಲೂ ಯಶಸ್ವಿಯಾಗಿತ್ತು. 

First Published Jul 12, 2021, 3:16 PM IST | Last Updated Jul 12, 2021, 3:16 PM IST

ನವದೆಹಲಿ(ಜು.12): ಕಳೆದ ಕೆಲ ದಿನಗಳ ಹಿಂದೆ ಕಣಿವೆ ನಾಡು ಜಮ್ಮುವಿನಲ್ಲಿ ನಡೆದ ಡ್ರೋನ್ ದಾಳಿ ಹಾಗೂ ಬಳಿಕ ಅನುಮಾನಾಸ್ಪದವಾಗಿ ಹಾರಾಟ ನಡೆಸುತ್ತಿದ್ದ ಡ್ರೋನ್‌ಗಳು ದೇಶಾದ್ಯಂತ ಭಾರೀ ಆತಂಕ ಸೃಷ್ಟಿಸಿದ್ದವು. ಉಗ್ರರ ಈ ಹೊಸ ಆಟಕ್ಕೆ ಭಾರತವೂ ಒಂದು ಕ್ಷಣ ವಿಚಲಿತಗೊಂಡಿತ್ತು. ಆದರೆ ಮರುಕ್ಷಣವೇ ಈ ಡ್ರೋನ್‌ಗಳನ್ನು ಹೊಡೆದಟ್ಟುವಲ್ಲೂ ಯಶಸ್ವಿಯಾಗಿತ್ತು. 

ಆದರೆ ಈ ಡ್ರೋನ್ ದಾಳಿ, ಹಾರಾಟದ ಬಳಿಕ, ಇಂತಹ ದಾಳಿಗಳನ್ನೆದುರಿಸಲು ಭಾರತ ಸಜ್ಜಾಗಿದ್ಯಾ? ಶತ್ರುಗಳ ಉದ್ದೇರಶವೇನು? ಇಂತಹ ದಾಳಿ ಭಾರತ ಕಡೆಗಣಿಸೋದು ಸರಿನಾ? ಎಂಬ ಪ್ರಶ್ನೆಗಳೂ ಉದ್ಭವಿಸಿದ್ದವೆ. ಈ ಬಗ್ಗೆ ನಿವೃತ್ತ ಯೋಧ ಲೆಫ್ಟಿನೆಂಟ್‌ ಕರ್ನಲ್ ನವೀನ್ ನವ್ಲಾನಿ ಸಂದರ್ಶನದಲ್ಲಿ ಉತ್ತರಿಸಿದ್ದು, ಶತ್ರುಗಳ ಖತರ್ನಾಕ್‌ ಆಟಕ್ಕೇನು ಉತ್ತರ ಎಂಬ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇfನು ತಮ್ಮ ಈ ಸಂದರ್ಶನದಲ್ಲಿ ಅವರು ಭಾರತ ಈಗಾಗಲೇ ಈ ಬಗ್ಗೆ ಎಚ್ಚರವಹಿಸಿ, ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡಿದೆ. ಆದರೆ ಇಂತಹ ದಾಳಿ ಗಡಿಗಿಂತ ಹೆಚ್ಚು ದೇಶದೊಳಗಿನ ಸೂಕ್ಷ್ಮ ಪ್ರದೇಶಗಳಿಗೆ ಮಾರಕ. ಹೀಗಾಗಿ ಸೂಕ್ಷ್ಮ ಪ್ರದೇಶಗಳ ಭದ್ರತೆ ಹೆಚ್ಚಿಸಬೇಕು. ಅಲ್ಲದೇ ಸಿಗ್ನಲ್ ಬ್ಲಾಕ್‌ ಮಾಡಿ ಡ್ರೋನ್ ದಾಳಿ ತಡೆಯಬೇಕು ಎಂದಿದ್ದಾರೆ.