Asianet Suvarna News

ಡೆಲ್ಟಾ + ವೈರಸ್‌ಗೆ ಭಾರತದಲ್ಲಿ ಮೊದಲ ಬಲಿ; ಕರ್ನಾಟಕದಲ್ಲಿ 2 ಪ್ರಕರಣ ಪತ್ತೆ!

Jun 24, 2021, 11:28 PM IST

ಎರಡೆರಡು ಬಾರಿ ರೂಪಾಂತರಿಗೊಂಡ ಡೆಲ್ಟಾ ಪ್ಲಸ್ ವೈರಸ್ ಅಪಾಯದ ಮಟ್ಟ ಮೀರುತ್ತಿದೆ.  ಡೆಲ್ಟಾ ಪ್ಲಸ್ ವೈರಸ್‌ಗೆ ಭಾರತದಲ್ಲಿ ಮೊದಲ ಬಲಿಯಾಗಿದೆ. ಈ ವೈರಸ್ ಕರ್ನಾಟಕದಲ್ಲೂ ಪತ್ತೆಯಾಗಿದೆ. ಈ ಮೂಲಕ ಆತಂಕ ಹೆಚ್ಚಾಗಿದೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಕಿತ್ತಾಟ ಜೋರಾಗಿದೆ. ಸಿದ್ದು ಹಾಗೂ ಡಿಕೆಶಿ ಬಣ ಮುಂದಿನ ಸಿಎಂ ಕುರಿತ ಹೇಳಿಕೆ ಹಾಗೂ ಬೆಂಬಲದಿಂದ ಕೆರಳಿ ಕೆಂಡವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ, ಕೊರೋನಾ ಪ್ರಕರಣ ಸೇರಿದಂತೆ ಇಂದಿನ ನ್ಯೂಸ್ ಹವರ್ ಸುದ್ದಿ ವಿಡಿಯೋ ಇಲ್ಲಿದೆ