Asianet Suvarna News Asianet Suvarna News
breaking news image

ದೆಹಲಿ ಚುನಾವಣೆ : 70ರ ಪೈಕಿ 67 ಕ್ಷೇತ್ರದಲ್ಲಿ ಕಾಂಗ್ರೆಸ್ ಠೇವಣಿ ಗೋವಿಂದಾ...!

ದೆಹಲಿಯಲ್ಲಿ  ಹ್ಯಾಟ್ರಿಕ್ ಬಾರಿಸಿದ ಅರವಿಂದ್ ಕೇಜ್ರಿವಾಲ್; ಒಂದಂಕಿಗಿಳಿದ ರಾಷ್ಟ್ರೀಯ ಪಕ್ಷಗಳು; ಕಾಂಗ್ರೆಸ್ ಡಕ್ ಔಟ್; 67 ಕ್ಷೇತ್ರಗಳಲ್ಲಿ ಠೇವಣಿಯೇ ಗೋವಿಂದ  

ನವದೆಹಲಿ (ಫೆ.11): ಇಂದು (ಮಂಗಳವಾರ) ಪ್ರಕಟವಾದ ದೆಹಲಿ ಚುನಾವಣೆ ಫಲಿತಾಂಶವು ರಾಷ್ಟ್ರೀಯ ಪಕ್ಷಗಳಿಗೆ ಭಾರೀ ದೊಡ್ಡ ಆಘಾತ ನೀಡಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಮಣ್ಣುಮುಕ್ಕಿಸಿದೆ.

ಇದನ್ನೂ ನೋಡಿ | ಬಿಜೆಪಿಯಲ್ಲಿ ತೀವ್ರಗೊಂಡ ಭಿನ್ನಮತ; ಎಂಟಿಬಿಯಿಂದ ಸಂಸದರಿಗೆ ಪಕ್ಷದ್ರೋಹಿ ಪಟ್ಟ

ಒಂದು ಕಡೆ ಅರವಿಂದ್ ಕೇಜ್ರಿವಾಲ್  ಹ್ಯಾಟ್ರಿಕ್ ಬಾರಿಸಿದ್ದಾರೆ, ಇನ್ನೊಂದು ಕಡೆ ರಾಷ್ಟ್ರೀಯ ಪಕ್ಷಗಳು ಒಂದಂಕಿಗಿಳಿದಿವೆ. ಈ ಬಾರಿಯೂ ಡಕ್ ಔಟ್ ಆಗಿರುವ ಕಾಂಗ್ರೆಸ್, 67 ಕ್ಷೇತ್ರಗಳಲ್ಲಿ ಠೇವಣಿಯನ್ನೇ ಕಳೆದುಕೊಂಡಿದೆ. 

ಇದನ್ನೂ ನೋಡಿ | ದೇಶಭಕ್ತಿ ಅಂದ್ರೆ ಪಾಕ್‌ ಜಪ ಅಲ್ಲ: ಬಿಜೆಪಿಗೆ ಆಪ್ ನಾಯಕ ಟಾಂಗ್

"

 

Video Top Stories