Asianet Suvarna News Asianet Suvarna News

ಕೊರೋನಾ ಎದುರಿಸಲು ರಾಷ್ಟ್ರ ರಾಜಧಾನಿಯಲ್ಲಿ ರಣತಂತ್ರ!

ಕೊರೋನಾ ಸದ್ಯ ದೇಶದೆಲ್ಲೆಡೆ ಅಟ್ಟಹಾಸ ಮೆರೆಯುತ್ತಿದೆ. ಈ ಮಹಾಮಾರಿಯನ್ನು ನಿಯಂತ್ರಿಸಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಣತಂತ್ರ ಹೂಡಲಾಗಿದೆ. ಈ ನಿಟ್ಟಿನ್ಲಲಿ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಸಿದ್ಧವಾಗಿದ್ದು, ಬರೋಬ್ಬರಿ ಹತ್ತು ಸಾವಿರ ಬೆಡ್ ವ್ಯವಸ್ಥೆ ಮಾಡಲಾಗಿದೆ.

ನವದೆಹಲಿ(ಜೂ.28) ಕೊರೋನಾ ಸದ್ಯ ದೇಶದೆಲ್ಲೆಡೆ ಅಟ್ಟಹಾಸ ಮೆರೆಯುತ್ತಿದೆ. ಈ ಮಹಾಮಾರಿಯನ್ನು ನಿಯಂತ್ರಿಸಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಣತಂತ್ರ ಹೂಡಲಾಗಿದೆ. ಈ ನಿಟ್ಟಿನ್ಲಲಿ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಸಿದ್ಧವಾಗಿದ್ದು, ಬರೋಬ್ಬರಿ ಹತ್ತು ಸಾವಿರ ಬೆಡ್ ವ್ಯವಸ್ಥೆ ಮಾಡಲಾಗಿದೆ.

ಚಾತರ್ಪುರ್ ಬಾಟಿ ಪ್ರದೇಶದಲ್ಲಿ ಈ ಕೇಂದ್ರ ನಿರ್ಮಿಸಲಾಗಿದ್ದು, ಇಪ್ಪತ್ತೆರಡು ಫುಟ್ಬಾಲ್ ಮೈದಾನದಷ್ಟು ವಿಸ್ತೀರ್ಣದಲ್ಲಿ ಇದನ್ನು ನಿರ್ಮಿಸಲಾಗಿದೆ. ಹದಿನೆಂಟು ಸಾವಿರ ಟನ್ ಎಸಿ ಉಪಕರಣಗಲೂ ಇಲ್ಲಿ ಅಳವಡಿಸಲಾಗಿದೆ. ಈ ಆಸ್ಪತ್ರೆಯಲ್ಲಿ ನೂರ ಹದಿನಾರು ವಿಭಾಗ ಹಾಗೂ ಒಂದು ಸಾವಿರ ಬೆಡ್‌ಗಳಿಗೆ ಆಸ್ಕಿಜನ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಪ್ರತಿ ಮೂರು ಬೆಡ್‌ಗೆ ಒಂದು ಸೀಲಿಂಗ್ ಫ್ಯಾಣ್ ಕೂಡಾ ಹಾಕಲಾಗಿದೆ.

650 ಶೌಚಾಲಯವೂ ಇದೆ. ಇಷ್ಟೇ ಅಲ್ಲದೇ ಮೂರು ಲಕ್ಷ ಮಂದಿಗೆ ನಿತ್ಯವೂ ಊಟದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸಾವಿರಕ್ಕೂ ಅಧಿಕ ವೈದ್ಯರು ಹಾಗೂ ಎರಡು ಸಾವಿರಕ್ಕೂ ಹೆಚ್ಚು ನರ್ಸಿಂಗ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.ರೈಲ್ವೇ ಇಲಾಖೆಯಿಂದ ಮೂರು ಸಾವಿರ ಬೆಡ್‌ಶೀಟ್ ಹಾಗೂ ತಲೆ ದಿಂಬಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಈಗಾಗಲೇ ಈ ಕೇರ್‌ಸೆಂಟರ್‌ಗೆ ಅಮಿತ್ ಶಾ ಹಾಗೂ ದೆಹಲಿ ಸಿಎಂ ಕೇಜ್ರೀವಾಲ್ ಭೇಟಿ ನೀಡಿದ್ದಾರೆ. 

Video Top Stories