ನದಿಗೆ ಬಿದ್ದ ಬಾಲಕನ ಸುತ್ತುವರಿದ ಕಿಲ್ಲರ್ ಮೊಸಳೆಗಳು!

ಆಕಸ್ಮಿಕವಾಗಿ ನದಿಗೆ ಬಿದ್ದ ಬಾಲಕನೋರ್ವನನ್ನು ಮೊಸಳೆಗಳು ಸುತ್ತುವರೆದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

First Published Aug 28, 2022, 5:03 PM IST | Last Updated Aug 28, 2022, 5:03 PM IST

ಆಕಸ್ಮಿಕವಾಗಿ ನದಿಗೆ ಬಿದ್ದ ಬಾಲಕನೋರ್ವನನ್ನು ಮೊಸಳೆಗಳು ಸುತ್ತುವರೆದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಬಾಲಕ ಆಕಸ್ಮಿಕವಾಗಿ ನದಿಗೆ ಬಿದ್ದಿದ್ದು, ಇದನ್ನು ನೋಡುತ್ತಿದ್ದಂತೆ ಮೊಸಳೆಗಳು ಆತನನ್ನು ಸುತ್ತುವರೆದಿವೆ. ಮೊಸಳೆಗಳನ್ನು ನೋಡಿ ಬಾಲಕ ಗಾಬರಿಯಿಂದ ಕಿರುಚುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದು ತಿಳಿಯುತ್ತಿದ್ದಂತೆ ಎನ್‌ಡಿಆರ್‌ಎಫ್ ತಂಡವೊಂದು ಸ್ಥಳಕ್ಕೆ ಧಾವಿಸಿ ಬಂದು ಬಾಲಕನನ್ನು ರಕ್ಷಿಸಿದೆ ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.