Asianet Suvarna News Asianet Suvarna News

ಚನ್ನಪಟ್ಟಣ ಟಿಕೆಟ್​ ಬೇಕೆಂದು ಪಟ್ಟು ಹಿಡಿದ ಸಿಪಿ ಯೋಗೇಶ್ವರ್

ಮೈತ್ರಿ ಪಾಳಯದಲ್ಲಿ ಚನ್ನಪಟ್ಟಣ ಟಿಕೆಟ್ ಮೇಲಾಟ ಶುರುವಾಗಿದೆ. ದೆಹಲಿ ಬರಲು ಯೋಗೇಶ್ವರ್​ಗೆ ಹೈಕಮಾಂಡ್ ಬುಲಾವ್ ನೀಡಿದೆ. ಕುಮಾರಸ್ವಾಮಿ ಮನವೊಲಿಸ್ತಾರಾ ಮೋದಿ, ಅಮಿತ್ ಶಾ ಎನ್ನುವ ಕುತೂಹಲ ಎಲ್ಲರಲ್ಲಿದೆ.

First Published Aug 16, 2024, 11:25 PM IST | Last Updated Aug 16, 2024, 11:25 PM IST

ಬೆಂಗಳೂರು (ಆ.16): ದಿನದಿಂದ ದಿನಕ್ಕೆ ಚನ್ನಪಟ್ಟಣ ಮೈತ್ರಿ ಟಿಕೆಟ್ ಫೈಟ್ ರಂಗೇರುತ್ತಿದೆ. ಚನ್ನಪಟ್ಟಣ ಟಿಕೆಟ್​ ಬೇಕೆಂದು ಸಿಪಿ ಯೋಗೇಶ್ವರ್ ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ತಾವು ಗೆದ್ದ ಕ್ಷೇತ್ರ ಉಳಿಸಿಕೊಳ್ಳಲೂ ಕುಮಾರಸ್ವಾಮಿ ರಣತಂತ್ರ ರೂಪಿಸಿದ್ದಾರೆ.

ನಿನ್ನೆ ಡಿಕೆಶಿ ಜತೆ ವೇದಿಕೆ ಹಂಚಿಕೊಂಡು ಸಿಪಿವೈ ಖಡಕ್​ ಸಂದೇಶ ನೀಡಿದ್ದು,  ಈ ಬೆನ್ನಲ್ಲೇ ಸೋಮವಾರ ದೆಹಲಿಗೆ ಬರಲು ಸಿಪಿವೈಗೆ ಬುಲಾವ್ ಸಿಕ್ಕಿದೆ. ಸೋಮವಾರ ಅಮಿತ್ ಶಾ ಭೇಟಿಯಾಗಿ ಸಿಪಿ ಯೋಗೇಶ್ವರ್‌ ಮಾತನಾಡಲಿದ್ದಾರೆ.

ದಶಕಗಳ ದ್ವೇಷ ಚರಿತ್ರೆ ಮರೆತುಬಿಟ್ಟರೇ ಚನ್ನಪಟ್ಟಣದ ಚತುರ ಸಿಪಿವೈ, ಕನಕಪುರದ ಸರದಾರ ಡಿಕೆಶಿ!

ಅಮಿತ್ ಶಾ ಎದುರೇ ಚನ್ನಪಟ್ಟಣ ಟಿಕೆಟ್ ಫೈನಲ್​ ಆಗಲಿದ್ಯಾ  ಎನ್ನುವ ಅನುಮಾನವೂ ಇದೆ. ಟಿಕೆಟ್ ಸಿಗದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸುಳಿವನ್ನೂ ಸಿಪಿ ಯೋಗೇಶ್ವರ್‌ ನೀಡಿದ್ದಾರೆ. ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸಿಪಿವೈ  ಹೇಳುತ್ತಿದ್ದಾರೆ.

Video Top Stories