Asianet Suvarna News Asianet Suvarna News

Corona Vaccine: ಜ.3 ರಿಂದ 15-18 ವರ್ಷದೊಳಗಿನ ಮಕ್ಕಳಿಗೆ ವ್ಯಾಕ್ಸಿನ್

- 15-18 ವರ್ಷದೊಳಗಿನ ಮಕ್ಕಳಿಗೆ 2022ರ ಜ.3 ರಿಂದ ಕೋವಿಡ್‌ ಲಸಿಕೆ ಅಭಿಯಾನ

- ಮಕ್ಕಳಿಗೆ, ವಯಸ್ಕರಿಗೆ ನೀಡಲು ಬೇಕು 20 ಕೋಟಿ ಡೋಸ್‌ ಲಸಿಕೆ

- 7.4 ಕೋಟಿ 15-18ರ ವಯೋಮಾನದ ಮಕ್ಕಳು

ನವದೆಹಲಿ (ಡಿ. 27): ದೇಶಾದ್ಯಂತ ಒಮಿಕ್ರೋನ್‌ (Omicron Threat) ಸೋಂಕು ಹೆಚ್ಚಾಗಿ, ಮೂರನೆ ಅಲೆಯ ಭೀತಿ ಆವರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ (PM Modi) ಮಹತ್ವದ ಘೋಷಣೆ ಮಾಡಿದ್ದಾರೆ. 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ 2022ರ ಜ.3 ರಿಂದ ಕೋವಿಡ್‌ ಲಸಿಕೆ ಅಭಿಯಾನ (Corona Vaccine) ಆರಂಭಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ ವೈದ್ಯರು ಸೇರಿದಂತೆ ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟಪೂರ್ವ ರೋಗ ಪೀಡಿತರಿಗೆ ಜ.10ರಿಂದ ಬೂಸ್ಟರ್‌ ಡೋಸ್‌ (Booster Dose) ನೀಡುವುದಾಗಿಯೂ ಪ್ರಕಟಿಸಿದ್ದಾರೆ. ದೇಶಾದ್ಯಂತ ಒಮಿಕ್ರೋನ್‌ ಸೋಂಕು ಹೆಚ್ಚಾಗಿ, ಮೂರನೆ ಅಲೆಯ ಭೀತಿ ಆವರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಅವರ ಈ ಹೇಳಿಕೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

Karnataka Politics: 2023 ರವರೆಗೆ ಬೊಮ್ಮಾಯಿಯವರೇ ಸಿಎಂ, ಬದಲಾವಣೆಯಿಲ್ಲ: ಬಿಜೆಪಿ ಸ್ಪಷ್ಟನೆ

2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಒಟ್ಟು 7.4 ಕೋಟಿ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿದ್ದಾರೆ. 13.79 ಕೋಟಿ 60 ವರ್ಷ ಮೇಲ್ಪಟ್ಟವಯಸ್ಕರಿದ್ದಾರೆ. ಈ ಪೈಕಿ ಶೇ.75 ರಷ್ಟುಜನರು ನಾನಾ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಕುಟುಂಬ ಹಾಗೂ ಆರೋಗ್ಯ ಕಲ್ಯಾಣ ಸಚಿವಾಲಯದ ವರದಿ ಹೇಳಿದೆ. ಅಂದರೆ 13.79 ಕೋಟಿ ಜನರ ಪೈಕಿ 10 ಕೋಟಿ ಜನರು ಬೂಸ್ಟರ್‌ ಡೋಸ್‌ ಪಡೆಯುವ ಅರ್ಹತೆ ಪಡೆಯುತ್ತಾರೆ. ಇವರ ಜೊತೆ 1 ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಮುಂಚೂಣಿ ಕಾರ್ಯಕರ್ತರು ಇದ್ದಾರೆ. ಹೀಗಾಗಿ 20 ಕೋಟಿಗಿಂತ ಹೆಚ್ಚಿನ ಡೋಸ್‌ ಹೆಚ್ಚುವರಿ ಡೋಸ್‌ ಲಸಿಕೆ ಬೇಕಾಗಿ ಬರಲಿದೆ.

Video Top Stories