Asianet Suvarna News Asianet Suvarna News

ಮಕ್ಕಳಿಗೆ ಸಿಕ್ಕೇ ಬಿಡ್ತು ಕೊರೋನಾ ಸಂಜೀವಿನಿ!

Oct 12, 2021, 3:21 PM IST

ನವದೆಹಲಿ(ಆ.12): 2 - 18 ವರ್ಷ ವಯೋಮಾನದ ಮಕ್ಕಳಿಗೆ ಕೋವಿಡ್–19 ಲಸಿಕೆ ಕೋವ್ಯಾಕ್ಸಿನ್   ನೀಡಲು ತಜ್ಞರ ಸಮಿತಿ ಶಿಫಾರಸು ಮಾಡಿರುವುದಾಗಿ ವರದಿಯಾಗಿದೆ. 

ಕೊರೋನಾ ಸಾಂಕ್ರಾಮಿಕ ಆರಂಭವಾದಾಗಿನಿಂದ ಇಲ್ಲಿಯವರೆಗೂ ಮಕ್ಕಳಿಗೆ ಕೊರೋನಾ ಲಸಿಕೆ ಬಂದಿರಲಿಲ್ಲ. ಬಳಿಕ ಮಕ್ಕಳ ಲಸಿಕೆಗಾಗಿ ಸತತ ಅಧ್ಯಯನ ನಡೆಸಿತ್ತು. ಇದೀಗ ಕೊನೆಗೂ ಈ ಸತತ ಪ್ರಯತ್ನಕ್ಕೆ ಫಲ ಲಭಿಸುವ ಕಾಲ ಸನ್ನಿಹಿತವಾಗಿದ್ದು, 2-18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಕೋವಿಡ್ ಲಸಿಕೆ ನೀಡುವಂತೆ ಎಸ್ ಇಸಿ ಸಂಸ್ಥೆ ಡಿಸಿಜಿಐಗೆ ಶಿಫಾರಸ್ಸು ಮಾಡಿದೆ.

ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ನೀಡುವ ಕುರಿತು ವಿಷಯ ತಜ್ಞರ ಸಮಿತಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಶಿಫಾರಸ್ಸು ಮಾಡಿದೆ. 

Video Top Stories