ಒಂದೇ ಆಟೋದಲ್ಲಿ 27 ಜನರ ಪ್ರಯಾಣ : ಆಟೋ ನಿಲ್ಲಿಸಿದ ಪೊಲೀಸರಿಗೆ ಶಾಕ್‌

ಉತ್ತರಪ್ರದೇಶದಲ್ಲಿ ಒಂದೇ ಆಟೋದಲ್ಲಿ ಬರೋಬರಿ 27 ಜನ ಪ್ರಯಾಣಿಸಿದ್ದು, ಆಟೋದಲ್ಲಿ ಪ್ರಯಾಣಿಸುತ್ತಿದ್ದ ಜನರನ್ನು ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ.

First Published Jul 12, 2022, 5:11 PM IST | Last Updated Jul 12, 2022, 5:11 PM IST

ಲಕ್ನೋ: ಸಾಮಾನ್ಯವಾಗಿ ಒಂದು ಆಟೋದಲ್ಲಿ ಎಷ್ಟು ಜನ ಪ್ರಯಾಣಿಸಬಹುದು. ಹೆಚ್ಚೆಂದರೆ ಮೂರು ಅದಕ್ಕೂ ಹೆಚ್ಚೆಂದರೆ ನಾಲ್ಕು. ಆದರೆ ಉತ್ತರಪ್ರದೇಶದಲ್ಲಿ ಒಂದೇ ಆಟೋದಲ್ಲಿ ಬರೋಬರಿ 27 ಜನ ಪ್ರಯಾಣಿಸಿದ್ದು, ಆಟೋದಲ್ಲಿ ಪ್ರಯಾಣಿಸುತ್ತಿದ್ದ ಜನರನ್ನು ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಜನರಿಂದ ತುಂಬಿ ತುಳುಕುತ್ತಿದ್ದ ಆಟೋ ನೋಡಿ ತಡೆದ ಪೊಲೀಸರಿಗೆ ಮಕ್ಕಳು ದೊಡ್ಡವರು ಸೇರಿ ಆದರೊಳಗಿದ್ದ ಜನರನ್ನು ನೋಡಿ ಶಾಕ್ ಆಗಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಂಟು ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 27 ಜನ ಒಂದೇ ಆಟೋದಲ್ಲಿ ಪ್ರಯಾಣಿಸುವ ಮೂಲಕ ಇವರು ಅನಾಯಾಸವಾಗಿ ಗಿನ್ನೆಸ್ ಪುಟ ಸೇರಿದ್ದಾರೆ ಎಂದು ನೋಡುಗರೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.