Asianet Suvarna News Asianet Suvarna News

ಬಸ್‌ ಬಾಗಿಲಲ್ಲಿ ನೇತಾಡ್ತಾ ಕಾಲೇಜಿಗೆ ಹೋಗ್ತೀರಾ: ಹಾಗಿದ್ರೆ ಈ ದೃಶ್ಯ ನೋಡಿ

ಬಸ್‌ನ ಬಾಗಿಲಿನಲ್ಲಿ ನೇತಾಡುತ್ತಾ ಕಾಲೇಜಿಗೆ ಹೊರಟ ವಿದ್ಯಾರ್ಥಿಯೋರ್ವ ಬಸ್ ಸ್ವಲ್ಪ ದೂರ ಸಮೀಪಿಸುತ್ತಿದ್ದಂತೆ ಬಸ್‌ನಿಂದ ರಸ್ತೆಗೆ ಬಿದ್ದಿದ್ದು, ಈ ಆಘಾತಕಾರಿ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.

First Published Aug 31, 2022, 2:42 PM IST | Last Updated Aug 31, 2022, 2:42 PM IST

ತುಂಬಿ ತುಳುಕುವ ಬಸ್ಸನೇರಿ ಬಾಗಿಲಿನಲ್ಲಿ ನೇತಾಡುತ್ತಾ ಕಾಲೇಜಿಗೆ ಹೋಗುವುದೆಂದರೆ ವಿದ್ಯಾರ್ಥಿಗಳಿಗೆ ಅದೇನೋ ಕ್ರೇಜ್‌, ಇದಕ್ಕಾಗಿಯೇ ಬಸ್‌ ಪೂರ್ತಿ ತುಂಬಿ ರಶ್‌ ಆಗುವವರೆಗೆ ಬಸ್‌ ಹೊರಭಾಗದಲ್ಲಿ ಕಾದು ನಿಂತು ಬಸ್‌ ಹೊರಡುವ ಸಮಯದಲ್ಲಿ ಓಡಿ ಬಂದು ಬಸ್‌ಗೆ ಹತ್ತಿ ಬಾಗಿಲಿನಲ್ಲಿ ನೇತಾಡುತ್ತಾರೆ. ಹೀಗೆ ಮೋಜು ಮಾಡಲು ಹೋಗಿ ಅನೇಕರು ಪ್ರಾಣ ಕಳೆದುಕೊಂಡಿರುವ ಹಲವು ಉದಾಹರಣೆಗಳಿವೆ. ಆದರೆ ಇಲ್ಲಿ ಮೋಜಿಗಾಗಿ ಮಾಡಿದ್ದೋ ಅಥವಾ ಬಸ್‌ ಒಳಗೆ ಜಾಗವಿಲ್ಲದ ಕಾರಣಕ್ಕೆ ನೇತಾಡಿದ್ದೋ ಗೊತ್ತಿಲ್ಲ, ತುಂಬಿ ತುಳುಕುತ್ತಿದ್ದ ಬಸ್‌ನ ಬಾಗಿಲಿನಲ್ಲಿ ನೇತಾಡುತ್ತಾ ಕಾಲೇಜಿಗೆ ಹೊರಟ ವಿದ್ಯಾರ್ಥಿಯೋರ್ವ ಬಸ್ ಸ್ವಲ್ಪ ದೂರ ಸಮೀಪಿಸುತ್ತಿದ್ದಂತೆ ಬಸ್‌ನಿಂದ ರಸ್ತೆಗೆ ಬಿದ್ದಿದ್ದು, ಈ ಆಘಾತಕಾರಿ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ತಮಿಳುನಾಡಿನಲ್ಲಿ (Tamilnadu) ಈ ಘಟನೆ ನಡೆದಿದೆ ಎನ್ನಲಾಗಿದೆ.