Asianet Suvarna News Asianet Suvarna News

ವಿಷವಾಗಿ ಬದಲಾಗ್ತಿದೆ ಉಸಿರಾಡುವ ಗಾಳಿ..! ತತ್ತರಿಸಿದ ದೆಹಲಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ಉಸಿರಾಡುವ ಗಾಳಿ ವಿಷವಾಗಿ ಮಾರ್ಪಾಡಾಗುತ್ತಿದೆ. ಹೀಗಿದ್ದರೂ ಇಲ್ಲಿನ ಕಲ್ಲಿದ್ದಲು ಕಾರ್ಖಾನೆಗಳು ಮಾತ್ರ ಸರ್ಕಾರ ದೆಷ್ಟೇ ಎಚ್ಚರಿಕೆ ನೀಡಿದರೂ ಕಾರ್ಯ ಮುಂದುವರೆಸಿವೆ.

ನವದೆಹಲಿ(ಜ.03): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ಉಸಿರಾಡುವ ಗಾಳಿ ವಿಷವಾಗಿ ಮಾರ್ಪಾಡಾಗುತ್ತಿದೆ. ಸರ್ಕಾರ ಎಷ್ಟೇ ಎಚ್ಚರಿಕೆ ನೀಡಿದರೂ ಕಲ್ಲಿದ್ದಲು ಕಾರ್ಖಾನೆಗಳು ಮಾತ್ರ ಕಾರ್ಯ ಮುಂದುವರೆಸಿವೆ.

ಈ ಮೊದಲೇ ವಾರ್ನಿಂಗ್ ನೀಡಿದ್ದ ಸರ್ಕಾರ ಕಾರ್ಖಾನೆ ಹೊರಸೂಸುವ ಸಲ್ಫರ್ ಆಕ್ಸೈಡ್ ತಡೆಗಟ್ಟಲು ಸೂಕ್ತ ಉಪಕರಣ ಅಳವಡಿಸುವಂತೆ ಸೂಚಿಸಿತ್ತು. ಆದರೆ ಅಧಿಕಾರಿಗಳ ಮಾತನ್ನು ಕಿವಿಗೆ ಹಾಕಿಕೊಳ್ಳದ ಕಾರ್ಖಾನೆಗಳು ಮಾಲೀನ್ಯ ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ.

ವೇದಿಕೆಯಲ್ಲೇ 50 ಸಾವಿರ ಕೋಟಿ ಕೇಳಿದ ಬಿಎಸ್‌ವೈಗೆ ಮೋದಿಯಿಂದ ಸಿಕ್ಕ ಉತ್ತರ!

ಭಾರತ ವಾಯುಮಾಲಿನ್ಯ ಪ್ರಮಾಣ ಪರೀಕ್ಷೆ ನಡೆಸಲು ಡಿಸೆಂಬರ್ 2017ರವರೆಗೆ ನೀಡಿದ್ದ ಡೆಡ್ ಲೈನ್ ವಿಸ್ತರಿಸಿತ್ತು. ವಿಷಯುಕ್ತ ಗಾಳಿಯಿಂದ ಹೆಚ್ಚುತ್ತಿರುವ ಶ್ವಾಸಕೋಶ ಸಂಬಂಧಿತ ಕಾಯಿಲೆ ಹಾಗೂ ವಾಯು ಮಾಲಿನ್ಯ ತಡೆಯುವ ಸವಾಲು ಅಧಿಕಾರಿಗಳ ಮುಂದಿತ್ತು. ದೆಹಲಿಯಲ್ಲಿ ಬುಧವಾರದಂದು ವಾಯ ಮಾಲೀನ್ಯ ಅತ್ಯಂತ ವಿಷಮ ಸ್ಥಿತಿ ತಲುಪಿದೆ. ಚಳಿಗಾಲದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗುವುದರಿಂದ ಆರೋಗ್ಯವಂತರ ಮೇಲೂ ಕೆಟ್ಟ ಪರಿಣಾಮ ಉಂಟಾಗುತ್ತದೆ. ಇನ್ನು ಖಾಸಗಿ ಕಾರ್ಖಾನೆಗಳಾದ ವೇದಾಂತ, ಲಾರ್ಸೆನ್ ಆ್ಯಂಡ್ ಟ್ಯೂಬ್ರೋ ಲಿಮಿಟೆಡ್‌ ಇನ್ನೊಂದು ಡೆಡ್ ಲೈನ್ ನೀಡುವಂತೆ ವಾದಿಸಲಾರಂಭಿಸಿವೆ.

ರೈತ ದರ್ಶನ ನನ್ನ ಸೌಭಾಗ್ಯ: ಕಿಸಾನ್ ಸಮ್ಮಾನ್ ಹಣ ಬಿಡುಗಡೆ ಮಾಡಿದ ಮೋದಿ!

Video Top Stories