Asianet Suvarna News Asianet Suvarna News

ಅಗ್ನಿಪಥ ಹಿಂಸಾಚಾರ: ವಾಟ್ಸಾಪ್ ಗ್ರೂಪ್‌ಗಳಲ್ಲಿ ಮೊದಲೇ ರೆಡಿಯಾಗಿತ್ತು ಪ್ಲ್ಯಾನ್..!

ಸೇನಾ ನೇಮಕಾತಿಗೆ ಸಂಬಂಧಿಸಿದಂತೆ ನೆರವು ನೀಡುವ ಕೆಲ ಕೋಚಿಂಗ್‌ ಸೆಂಟರ್‌ಗಳು ಅಗ್ನಿಪಥ (Agnipath)  ವಿರೋಧಿ ಹಿಂಸಾಚಾರದ (Violence) ಹಿಂದಿನ ಶಕ್ತಿ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. 

ಸೇನಾ ನೇಮಕಾತಿಗೆ ಸಂಬಂಧಿಸಿದಂತೆ ನೆರವು ನೀಡುವ ಕೆಲ ಕೋಚಿಂಗ್‌ ಸೆಂಟರ್‌ಗಳು ಅಗ್ನಿಪಥ (Agnipath)  ವಿರೋಧಿ ಹಿಂಸಾಚಾರದ (Violence) ಹಿಂದಿನ ಶಕ್ತಿ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ತೆಲಂಗಾಣದ 9 ಕಡೆ ಕೋಚಿಂಗ್‌ ಸೆಂಟರ್‌ಗಳನ್ನು ಹೊಂದಿದ್ದ ಈಗ, ಅಗ್ನಿಪಥ ಯೋಜನೆ ಪ್ರಕಟವಾಗುತ್ತಲೇ, ಅವಲು ಸುಬ್ಬರಾವ್‌ ಎಂಬಾತ ವಾಟ್ಸಾಪ್‌ ಗ್ರೂಪೊಂದನ್ನು ಆರಂಭಿಸಿ, ಅದರಲ್ಲಿ ಯೋಜನೆ ವಿರುದ್ಧ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದೂ ಅಲ್ಲದೆ, ತನ್ನ ಬಳಿ ತರಬೇತಿ ಪಡೆದಿದ್ದ ವಿದ್ಯಾರ್ಥಿಗಳಿಗೆ ಹಿಂಸಾಚಾರಕ್ಕೆ ಪ್ರೇರೇಪಿಸಿದ್ದ ಎನ್ನಲಾಗಿದೆ.

Interview: ಅಗ್ನಿಪಥ್ ಸ್ಕೀಂ ಹಾಗೂ ರಾಹುಲ್ ಇಡಿ ಕೇಸ್: ಬಹಳಷ್ಟು ವಿಚಾರ ಮಾತನಾಡಿದ ಓಂ ಬಿರ್ಲಾ

ಈತನ ಕರೆಯ ಮೇರೆಗೆ ರಾಜ್ಯದ ವಿವಿಧ ಭಾಗಗಳಿಂದ ನೂರಾರು ವಿದ್ಯಾರ್ಥಿಗಳು ಹೈದರಾಬಾದ್‌ ಮತ್ತು ಸಿಕಂದರಾಬಾದ್‌ಗೆ ಆಗಮಿಸಿ, ರೈಲ್ವೆ ನಿಲ್ದಾಣದಲ್ಲಿ ಲೂಟಿ, ಹಿಂಸಾಚಾರ ನಡೆಸಿದ್ದರು. ಈ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ 19 ವರ್ಷದ ಯುವಕನೊಬ್ಬ ಸಾವನ್ನಪ್ಪಿದ್ದ. ಘಟನೆ ಕುರಿತು ಫೋನ್‌ ಕರೆ ಮತ್ತಿತರೆ ಸಾಕ್ಷ್ಯಗಳನ್ನು ಕಲೆಹಾಕಿದ ಪೊಲೀಸರು, ಶನಿವಾರ ಸುಬ್ಬರಾವ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ ಬಳಿಕ ಬಂಧಿಸಿದ್ದಾರೆ. ಜೊತೆಗೆ ಈತನ ಕರೆ ಮೇರೆಗೆ ಆಗಮಿಸಿ ಹಿಂಸಾಚಾರ ನಡೆಸಿದ್ದ 45 ಯುವಕರನ್ನು ಕೂಡಾ ಬಂಧಿಸಿದ್ದಾರೆ. 

ಬಿಹಾರದ ತಾರೆಗ್ನ ರೈಲು ನಿಲ್ದಾಣದಲ್ಲಿ ಶನಿವಾರ ನಡೆದ ಹಿಂಸಾಚಾರ ಪ್ರಕರಣ ಸಂಬಂಧ ಎರಡು ಕೋಚಿಂಗ್‌ ಸೆಂಟರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೆ ಪಟನಾ ಮತ್ತು ರಾಜ್ಯದ ಇತರೆ ಭಾಗಗಳಲ್ಲ ಇರುವ ಇತರೆ 8 ಕೋಚಿಂಗ್‌ ಸೆಂಟರ್‌ಗಳ ಕೂಡಾ ಹಿಂಸೆಗೆ ಪ್ರಚೋದನೆ ನೀಡಿದ ಮಾಹಿತಿ ಸಿಕ್ಕಿದೆ. ಹಿಂಸಾಕೃತ್ಯಗಳಿಗೆ ಸಂಬಂಧಿಸಿದಂತೆ ವಿಡಿಯೋ ದೃಶ್ಯಾವಳಿಗಳನ್ನು ಆಧರಿಸಿ 700 ಪ್ರತಿಭಟನಾಕಾರರನ್ನು ಗುರುತಿಸಿ ಬಂಧಿಸಲಾಗಿದೆ.