ಗ್ರೇಟ್ ಎಸ್ಕೇಪ್: ಮಕ್ಕಳನ್ನು ಹಾವಿನಿಂದ ರಕ್ಷಿಸಿದ ವೈರಲ್ ವಿಡಿಯೋಗಳು...

ಮಕ್ಕಳನ್ನು ಹಾವುಗಳಿಂದ ಪಾರು ಮಾಡಿದಂತಹ ಹಲವು ವೈರಲ್‌ ವಿಡಿಯೋಗಳು ಇಲ್ಲಿವೆ.

First Published Aug 14, 2022, 2:56 PM IST | Last Updated Aug 14, 2022, 2:56 PM IST

ಮನೆ ಮೆಟ್ಟಿಲ ಕೆಳಗೆ ತೆವಳುತ್ತಾ ಸಾಗುತ್ತಿದ್ದ ನಾಗರಹಾವಿನಿಂದ ಮಗನನ್ನು ರಕ್ಷಿಸಿದ್ದ ಘಟನೆ ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ನಡೆದಿದ್ದು, ಈ ಘಟನೆ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿ ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಮಂಡ್ಯದಲ್ಲಿ ತಾಯಿಯೊಬ್ಬರು ಹಾವಿನ ದವಡೆಯಿಂದ ಮಗುವನ್ನು ರಕ್ಷಿಸಿದ ರೀತಿಯಲ್ಲೇ ಇದಕ್ಕೂ ಹಿಂದೆ ಹಲವು ಇಂತಹ ಘಟನೆಗಳು ನಡೆದಿವೆ. ಹಾವಿನಿಂದ ಮಕ್ಕಳು ಗ್ರೇಟ್ ಎಸ್ಕೇಪ್ ಆದಂತಹ ಹಲವು ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಕ್ಕಳನ್ನು ಸಾವಿನ ದವಡೆಯಿಂದ ಪಾರು ಮಾಡಿದಂತಹ ಹಲವು ವಿಡಿಯೋಗಳು ಇಲ್ಲಿವೆ.