Asianet Suvarna News Asianet Suvarna News

ಇನ್ಮುಂದೆ ಶಾಲೆಗಳ ಬಳಿ ಜಂಕ್ ಫುಡ್ ಮಾರಾಟಕ್ಕೆ ನಿಷೇಧ!

ಶಾಲೆಗಳ 50 ಮೀ. ಸುತ್ತ ಚಿಪ್ಸ್, ಬರ್ಗರ್‌ ಅಥವಾ ನೂಡಲ್ಸ್‌ನಂತಹ ಕುರುಕಲು ತಿಂಡಿ ಮಾರಾಟವನ್ನು ನಿಷೇಧಿಸುವ ಕರಡು ನಿಯಮಗಳಿಗೆ ಅನುಮೋದನೆ ನೀಡಿ, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅನಾರೋಗ್ಯ ಕಾಡುವಂಥ ಇಂಥ ಆಹಾರ ಪದಾರ್ಥಗಳಿಂದ ಮಕ್ಕಳು ದೂರ ಇರಬೇಕೆಂಬ ಕಾರಣದಿಂದ ಸರಕಾರ ಇಂಥದ್ದೊಂದು ನಿರ್ಧಾರಕ್ಕೆ ಬಂದಿದೆ.

ನವದೆಹಲಿ (ನ.06): ಶಾಲೆಗಳ 50 ಮೀ. ಸುತ್ತ ಚಿಪ್ಸ್, ಬರ್ಗರ್‌ ಅಥವಾ ನೂಡಲ್ಸ್‌ನಂತಹ ಕುರುಕಲು ತಿಂಡಿ ಮಾರಾಟವನ್ನು ನಿಷೇಧಿಸುವ ಕರಡು ನಿಯಮಗಳಿಗೆ ಅನುಮೋದನೆ ನೀಡಿ, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅನಾರೋಗ್ಯ ಕಾಡುವಂಥ ಇಂಥ ಆಹಾರ ಪದಾರ್ಥಗಳಿಂದ ಮಕ್ಕಳು ದೂರ ಇರಬೇಕೆಂಬ ಕಾರಣದಿಂದ ಸರಕಾರ ಇಂಥದ್ದೊಂದು ನಿರ್ಧಾರಕ್ಕೆ ಬಂದಿದೆ.

ಇದನ್ನೂ ನೋಡಿ | ಆರೋಗ್ಯ ಹಾಳು ಮಾಡ್ಕೋಬೇಡಿ! ಡಯಟ್‌ನಲ್ಲಿರಲಿ ಈ ಆಹಾರ...

ಇನ್ನು ಶಾಲಾ ಕ್ಯಾಂಪಸ್‌ ಹಾಗೂ ಸುತ್ತಮುತ್ತ ಕುರುಕಲು ತಿಂಡಿ ಮಾರುವಂತಿಲ್ಲ. ಶಾಲಾ ಕ್ಯಾಂಪಸ್‌ ಸುತ್ತಲಿನ 50 ಮೀಟರ್‌ ವ್ಯಾಪ್ತಿಯಲ್ಲಿ ಜಂಕ್‌ ಫುಡ್‌ನ ಅಪಾಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಅಲ್ಲದೇ ಈ ಪ್ರದೇಶಗಳಲ್ಲಿ ಈ ಆಹಾರ ಪದಾರ್ಥಗಳ ಜಾಹೀರಾತು ಹಾಕುವುದನ್ನೂ ನಿಷೇಧಿಸಲಾಗುತ್ತದೆ.
 

Video Top Stories