Asianet Suvarna News Asianet Suvarna News

ಮಮತಾ ಬ್ಯಾನರ್ಜಿ ಇಟಲಿ ಭೇಟಿಗೆ ತಣ್ಣೀರು, ಅನುಮತಿ ನಿರಾಕರಿಸಿದ ಕೇಂದ್ರ

ಇಟಲಿಯ ರೋಮ್‌ನಲ್ಲಿ ಅ.6-7ರಂದು ನಡೆಯಲಿರುವ ವಿಶ್ವ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕನಸಿಗೆ ಕೇಂದ್ರ ಸರ್ಕಾರ ತಣ್ಣೀರೆರಚಿದೆ. 

Sep 26, 2021, 9:59 AM IST

ಕೋಲ್ಕತಾ (ಸೆ. 26):  ಇಟಲಿಯ ರೋಮ್‌ನಲ್ಲಿ ಅ.6-7ರಂದು ನಡೆಯಲಿರುವ ವಿಶ್ವ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕನಸಿಗೆ ಕೇಂದ್ರ ಸರ್ಕಾರ ತಣ್ಣೀರೆರಚಿದೆ. ರಾಜಕೀಯ ಕಾರಣಗಳನ್ನು ನೀಡಿ ಕೇಂದ್ರ ಗೃಹ ಸಚಿವಾಲಯವು ಮಮತಾರ ಇಟಲಿ ಪ್ರವಾಸಕ್ಕೆ ಅನುಮತಿ ನಿರಾಕರಿಸಿದೆ.

ವಿಶ್ವದ 500ಕ್ಕೂ ಹೆಚ್ಚು ಧಾರ್ಮಿಕ ಮತ್ತು ರಾಜಕೀಯ ನಾಯಕರು ಭಾಗಿಯಾಗುವ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮಮತಾಗೆ ರೋಮ್‌ನಿಂದ ಆಹ್ವಾನ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಮತಾ ಕೇಂದ್ರ ಗೃಹ ಸಚಿವಾಲಯದ ಅನುಮತಿ ಕೋರಿದ್ದರು.ಆದರೆ ರೋಮ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮ ರಾಜ್ಯದ ಮುಖ್ಯಮಂತ್ರಿಯೊಬ್ಬರು ಪಾಲ್ಗೊಳ್ಳುವ ಸ್ಥಾನಮಾನದ್ದಲ್ಲ ಎಂಬ ಕಾರಣ ನೀಡಿ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ.