Asianet Suvarna News Asianet Suvarna News

ಚುನಾವ​ಣೆಗೆ ಮುನ್ನ ಪಂಜಾಬ್‌ ಸಿಎಂ ರಾಜೀನಾಮೆ: ಕ್ಯಾಪ್ಟನ್ ಇಲ್ಲದೇ ಬಡವಾಯ್ತಾ ಕಾಂಗ್ರೆಸ್.?

- ಪಂಜಾಬ್‌ ಸಿಎಂ ರಾಜೀನಾಮೆ,  ಕಾಂಗ್ರೆಸ್‌ ಬಿಕ್ಕಟ್ಟು ಮತ್ತಷ್ಟು ಉಲ್ಬಣ

- ಪಂಜಾಬ್‌ ಕಾಂಗ್ರೆ​ಸ್‌ಗೆ ಸಂಕ​ಷ್ಟ

- ಇದೇ ಅವ​ಕಾಶ ಬಳ​ಸಿ​ಕೊಂಡು ಅಕಾ​ಲಿ​ದಳ, ಆಪ್‌ ಮೇಲುಗೈ ಸಂಭವ

 

ಬೆಂಗಳೂರು (ಸೆ. 19): ಕಾಂಗ್ರೆಸ್‌ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟಿಗೆ ಬೇಸತ್ತು ಪಂಜಾಬ್‌ ಮುಖ್ಯಮಂತ್ರಿ ಹುದ್ದೆಗೆ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಸಿಂಗ್‌ ರಾಜೀನಾಮೆ ಪ್ರಕಟಿಸಿದ್ದಾರೆ. ವಿಧಾನಸಭೆ ಚುನಾವಣೆಗೆ ಇನ್ನು ಕೇವಲ 5 ತಿಂಗಳು ಮಾತ್ರವೇ ಬಾಕಿ ಇರುವಾಗ ಸಿಂಗ್‌ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿದಿದ್ದು ಕಾಂಗ್ರೆಸ್‌ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬಿಜೆಪಿ ಅಬ್ಬ​ರದ ನಡುವೆ ಒಂದೊಂದೇ ರಾಜ್ಯ​ಗ​ಳನ್ನು ಕಳೆ​ದು​ಕೊಂಡಿ​ರುವ ಕಾಂಗ್ರೆ​ಸ್‌ಗೆ ಈ ವಿದ್ಯ​ಮಾ​ನವು ಮುಂದಿನ ಚುನಾ​ವ​ಣೆ​ಯಲ್ಲಿ ಇನ್ನೊಂದು ರಾಜ್ಯ ಕಳೆ​ದು​ಕೊ​ಳ್ಳುವ ಭೀತಿ ಎದು​ರಾ​ಗಿ​ದೆ.

ಹೆಚ್ಚುತ್ತಲೇ ಇದೆ ಮೋದಿ ಜನಪ್ರಿಯತೆ: ಏನಿದರ ರಹಸ್ಯ?

ಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಜೊತೆಗಿನ ಮನಸ್ತಾಪ ಮತ್ತು ಶಾಸಕರಿಂದ ವಿರೋಧವನ್ನು ಎದುರಿಸಿದ್ದ ಅಮರೀಂದರ್‌, ಪಕ್ಷದಲ್ಲಿ ತಮಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಪಂಜಾಬ್‌ನಲ್ಲಿ ಕಾಂಗ್ರೆಸ್ ಅತಂತ್ರವಾಗುತ್ತಿದೆಯಾ..? ಇಲ್ಲಿದೆ ಡಿಟೇಲ್ಸ್..!