Asianet Suvarna News Asianet Suvarna News

ಮನೆಯೊಳಗೆ ನುಗ್ಗಿ ಗೂಳಿಗಳ ಗೂಂಡಾಗಿರಿ!

Jul 20, 2021, 3:14 PM IST

ನವದೆಹಲಿ(ಜು.20):  ಇಲ್ಲೊಂದು ಕಡೆ ಎರಡು ದೈತ್ಯ ಗೂಳಿಗಳು ಕಿರಿಕ್ ಮಾಡಿಕೊಂಡಿವೆ. ಈ ವೇಳೆ ಒಂದು ಗೂಳಿ ಮನೆಯೊಳಗೇ ನುಗ್ಗಿದೆ. ಹಾಗಾಧ್ರೆ ಒಳಗಿದ್ದವರ ಗತಿ ಏನು ಅಂತಿರಾ? 

ಹೌದು ದನ, ಗೂಳಿಗಳು ಯಾವಾಗ ಕೆರಳುತ್ತವೆ ಎನ್ನಲು ಸಾಧ್ಯವಿಲ್ಲ. ಒಮ್ಮೆ ಇವು ಕೆರಳಿ ಜಗಳ ಆರಂಭಿಸಿದರೆ ಕತೆ ಮುಗಿಯಿತು. ಅಲ್ಲಿ ಜನರು ದಿಕ್ಕಾಪಾಲಾಗಿ ಓಡುತ್ತಾರೆ. ಸದ್ಯ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ರಸ್ತೆ ಬದಿಯಲ್ಲಿ ಗುದ್ದಾಡಿಕೊಂಡಿದ್ದ ಗೂಳಿಗಳು ಏಕಾಏಕಿ ಮನೆಯೊಳಗೆ ನುಗ್ಗಿವೆ. ಅಚಾನಕ್ಕಾಗಿ ಗೂಳಿ ನುಗ್ಗಿದ್ದನ್ನು ಕಂಡು ಒಳಗಿದ್ದವರೂ ಬೆಚ್ಚಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.