Asianet Suvarna News Asianet Suvarna News

UP Election 2022 : ಹೋರ್ಡಿಂಗ್ಸ್, ಫ್ಲೆಕ್ಸ್ ಎಲ್ಲಾ ಹಾಕ್ಸಿದ್ದೀನಿ.. ಪ್ಲೀಸ್ ಟಿಕೆಟ್ ಕೊಡಿ!

ಉತ್ತರ ಪ್ರದೇಶ ಚುನಾವಣೆ, ಟೆಕೆಟ್‌ಗಾಗಿ ನಡೆಯುತ್ತಿದೆ ಕಸರತ್ತು
ಬಹುಜನ ಸಮಾಜ ಪಾರ್ಟಿ ಮುಖಂಡ ಅರ್ಶದ್ ರಾಣಾಗೆ ಸಿಗದ ಟಿಕೆಟ್
ಬಿಎಸ್ ಪಿ ಮುಖಂಡ ಕಣ್ಣೀರು ಹಾಕಿರುವ ವಿಡಿಯೋ ವೈರಲ್

ಲಖನೌ (ಜ. 14): ಏಳು ಹಂತಗಳಲ್ಲಿ ನಡೆಯಲಿರುವ ಉತ್ತರ ಪ್ರದೇಶ (Uttar Pradesh) ಚುನಾವಣೆ ರಂಗೇರಿದೆ. ಎಲ್ಲಾ ಪಕ್ಷಗಳು ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿವೆ. ಈ ನಡುವೆ ಬಹುಜನ ಸಮಾಜ್ ಪಾರ್ಟಿಯ (Bahujan Samaj Party) ನಾಯಕ ಆರ್ಶದ್ ರಾಣಾ (Arshad Rana) ವಿಡಿಯೋ ಸಖತ್ ವೈರಲ್ ಆಗಿದೆ. ಬಿಎಸ್ ಪಿಯಿಂದ (BSP) ಈ ಬಾರಿಯೂ ಆರ್ಶದ್ ರಾಣಾಗೆ ಟಿಕೆಟ್ ನಿರಾಕರಿಸಲಾಗಿದ್ದು, ಟಿಕೆಟ್ ಕೊಡುವಂತೆ ಬಿಕ್ಕಿಬಿಕ್ಕಿ ಅಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಹೋರ್ಡಿಂಗ್, ಫ್ಲೆಕ್ಸ್ ಎಲ್ಲವನ್ನೂ ಹಾಕಿದ್ದೇನೆ, ಪ್ಲೀಸ್ ಟಿಕೆಟ್ ಕೊಡಿ ಎಂದು ಅವರು ವಿಡಿಯೋದಲ್ಲಿ ಬೇಡಿಕೊಂಡಿದ್ದಾರೆ.

UP Election 2022 : ದಲಿತ ವಿರೋಧಿ ಟೀಕೆಯ ಬೆನ್ನಲ್ಲೇ, ದಲಿತರ ಮನೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಊಟ
ನನಗೆ ಅವಮಾನವಾದಂತಾಗಿದೆ. ಇಂಥದ್ದೊಂದು ಸ್ಥಿತಿ ಎದುರಾಗಬಹುದು ಎಂದು ನಾನು ನಿರೀಕ್ಷೆಯನ್ನೇ ಮಾಡಿರಲಿಲ್ಲ. ಬಿಎಸ್ ಪಿ ಕಚೇರಿಯ ಒಳಗೆ ಕೂರಿಸಿದ ಅವರು, ನನ್ನ ಬಿಟ್ಟು ಬೇರೊಬ್ಬರಿಗೆ ಚುನಾವಣೆಯ ಟಿಕೆಟ್ ನೀಡಿದ್ದಾರೆ. ನೀವು ಪ್ರತಿದಿನವೂ ನ್ಯೂಸ್ ನೋಡುತ್ತಿರಬಹುದು. ಎಲ್ಲಾ ಕಡೆ ನಾನು ಹೋರ್ಡಿಂಗ್ ಹಾಕಿದ್ದೇನೆ. ಚುನಾವಣೆ ಗೆಲ್ಲಲು ಎಲ್ಲವನ್ನೂ ಮಾಡಿದ್ದೇನೆ. ಈ ಎಲ್ಲಾ ಪ್ರಯತ್ನದ ಹೊರತಾಗಿಯೂ ನನಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಇನ್ನು ಟಿಕೆಟ್ ಗಾಗಿ ಪಾರ್ಟಿ 50 ಲಕ್ಷ ಕೇಳಿದೆ ಎಂದು ಆರೋಪಿಸಿರುವ ರಾಣಾ, " ನನ್ನ ಬಳಿ ಅಷ್ಟು ಹಣ ಇಲ್ಲ ಎಂದು ಅವರಿಗೆ ಹೇಳಿದ್ದೆ. ಬಳಿಕ ನನ್ನ ತಾಯಿಯ ಬಳಿ ಈ ಕುರಿತಾಗಿ ಮಾತನಾಡಿದ ಬಳಿಕ ನನ್ನ ಶ್ರಮವನ್ನು ನೋಡಿ ಅವರು ಹಣವನ್ನು ಅರೇಂಜ್ ಮಾಡಲು ಒಪ್ಪಿದ್ದರು. ಈಗಾಗಲೇ ಕೆಲವು ಹಂತದಲ್ಲಿ ಹಣವನ್ನು ಪಕ್ಷಕ್ಕೆ ಕಟ್ಟಿದ್ದೇನೆ. ಆದರೂ ಟಿಕೆಟ್ ನಿರಾಕರಣೆ ಮಾಡಲಾಗಿದೆ' ಎಂದು ಕಣ್ಣೀರಿಟ್ಟು ಹೇಳಿದ್ದಾರೆ.

Video Top Stories