Loksabha: ಬಿಜೆಪಿ ಫೈಟ್..ಕಾಂಗ್ರೆಸಿಗೆ ಲಾಭ ಕೊಡುತ್ತಾ..? ಬಿಜೆಪಿ ಮೊದಲ ಲಿಸ್ಟ್ ಬಂದ್ರೂ..ರಾಜ್ಯದವರ ಹೆಸರೇ ಇಲ್ಲ!
ಗೋ ಬ್ಯಾಕ್ ಶೋಭಾ ಕರಂದ್ಲಾಜೆ ಕೂಗು ಎದ್ದಿದ್ದೇಕೆ..?
ತುಮಕೂರಿನಿಂದ ಸೋಮಣ್ಣ ಸ್ಪರ್ಧಿಸೋದು ಪಕ್ಕಾನಾ..?
ಹಾವೇರಿ ಕ್ಷೇತ್ರದಿಂದ ಬಸವರಾಜ್ ಬೊಮ್ಮಾಯಿ ನಿಲ್ತಾರಾ..?
ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಈಗ ಮತ್ತೊಮ್ಮೆ ಸಾಭೀತಾಗುತ್ತಿದೆ. ಒಳಜಗಳಕ್ಕೆ ಬಿದ್ದು ವಿಧಾನಸಭಾ ಚುನಾವಣೆಯನ್ನು ಹೀನಾಯವಾಗಿ ಸೋತರೂ ರಾಜ್ಯ ಬಿಜೆಪಿಗೆ(BJP) ಬುದ್ದಿ ಬಂದಂತಿಲ್ಲ. ಈಗ ಎಲ್ಲ ಕಡೆ ಲೋಕಸಭಾ(Loksabha) ಸಮರ ಶುರುವಾಗಿದೆ. ಆದ್ರೆ ರಾಜ್ಯ ಬಿಜೆಪಿಯಲ್ಲಿ ಟಿಕೆಟ್‌ಗಾಗಿ(Ticket) ಒಳಗೊಳಗೆ ಫೈಟಿಂಗ್ ಶುರುವಾಗಿದೆ. ಅನೇಕ ಪ್ರಮುಖ ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಫೈಟಿಂಗ್ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರ್ತಿವೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ. ರಾಜ್ಯ ಬಿಜೆಪಿಯಲ್ಲಿ ಒಳ ಕಿತ್ತಾಟಗಳು ಜೋರಾಗಿವೆಯಂತೆ. ಹೀಗಾಗಿ, 2024ರ ಚುನಾವಣೆಯಲ್ಲಿ ಬಿಜೆಪಿಯ ಒಳ ಕಿತ್ತಾಟ ಕಾಂಗ್ರೆಸ್‌ಗೆ(Congress) ಲಾಭ ತಂದುಕೊಡಬಹುದು ಎಂಬ ಮಾತುಗಳು ಕೇಳಿ ಬರ್ತಿವೆ. ಚುನಾವಣಾ ಆಯೋಗ ಇನ್ನು ಎಲೆಕ್ಷನ್ ಅನೌನ್ಸ್ ಮಾಡಿಯೇ ಇಲ್ಲ. ಅಷ್ಟರಲ್ಲಾಗಲೇ ಕೇಂದ್ರ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಆದ್ರೆ, ಅಚ್ಚರಿ ಏನ್ ಗೊತ್ತಾ? ಬಿಜೆಪಿ ಬಿಡುಗಡೆಗೊಳಿಸಿದ ಈ ಮೊದಲ ಪಟ್ಟಿಯಲ್ಲಿ ರಾಜ್ಯದ ಕುರಿತು ಸುಳಿವೇ ಇಲ್ಲ.
ಇದನ್ನೂ ವೀಕ್ಷಿಸಿ: BJP VS Congress: ಇಟ್ಟ ಟಾರ್ಗೆಟ್ ಮುಟ್ಟೋದು ಪದ್ಮಪಾಳಯವೋ..? ಹಸ್ತಪಡೆಯೋ..?