ನಾರಾಯಣನ ಸೇವಕರು: BAPS ಸ್ವಯಂ ಸೇವಕರ ಸುವರ್ಣ ಮಹೋತ್ಸವ ಕಾರ್ಯಕ್ರಮ

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ  BAPS ಸ್ವಾಮಿನಾರಾಯಣ ಸಂಸ್ಥೆ ಆಯೋಜಿಸಿದ್ದ ಸ್ವಯಂ ಸೇವಕರ ಸುವರ್ಣ ಮಹೋತ್ಸವ.
 

First Published Dec 9, 2024, 4:22 PM IST | Last Updated Dec 9, 2024, 4:22 PM IST

ನರೇಂದ್ರ ಮೋದಿ ಸ್ಟೇಡಿಯಂ ಗುಜರಾತ್​​ನ ಅಹಮಾದಾಬಾದ್​​ನಲ್ಲಿರುವ ಈ ಸ್ಟೇಡಿಯಂ ವಿಶ್ವದ ಅತಿ ದೊಡ್ಡ ಕ್ರೀಡಾಂಗಣವೆಂಬ ಹೆಗ್ಗಳಿಕೆ ಪಡೆದಿದೆ. 1,32,000 ಜನರ ಸಾಮರ್ಥ್ಯದ ಈ ಕ್ರೀಡಾಂಗಣದಲ್ಲಿ ಡಿಸೆಂಬರ್ 7ರಂದು ಅಕ್ಷರಶಃ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಎಲ್ಲೆಲೂ ಸಂಭ್ರಮ, ಸಡಗರ​ ಮನೆಮಾಡಿತ್ತು. ಬೃಹತ್​​ ಕ್ರೀಡಾಂಗಣದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಕಣ್ಣು ಹಾಯಿಸಿದಲೆಲ್ಲ ಜನಸಾಗರವೇ ಕಾಣುತ್ತಿತ್ತು. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಬೆಳಕಿನ ಚಿತ್ತಾರ, ಬಾನಂಗಳದಲ್ಲಿ ಕಲರವ ಮೂಡಿಸಿದ ಸಿಡಿಮದ್ದುಗಳು 
ನೆರೆದಿದ್ದ ಜನರನ್ನ ರೋಮಾಂಚನಗೊಳಿಸಿದವು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಷ್ಟೆಲ್ಲ ಸಂಭ್ರಮ ಸೃಷ್ಟಿಗೆ ಕಾರಣವಾಗಿದ್ದು BAPS ಸ್ವಾಮಿನಾರಾಯಣ ಸಂಸ್ಥೆ ಆಯೋಜಿಸಿದ್ದ ಸ್ವಯಂ ಸೇವಕರ ಸುವರ್ಣ ಮಹೋತ್ಸವ.