ಅಯೋಧ್ಯೆ ಸ್ಫೋಟಿಸಿ ಮಸೀದಿ ಕಟ್ಟಲು PFI ನಡೆಸಿತ್ತು ಸಂಚು, ತನಿಖೆಯಲ್ಲಿ ಬಯಲು!
ನಿಷೇಧಿತ ಉಗ್ರ ಸಂಘಟನೆ ಪಿಎಫ್ಐನ ಮತ್ತೊಂದು ಸಂಚು ಬಯಲು, ಪಕ್ಷ ಬಿಡಲು ಮುಂದಾದ ಜಿಟಿಡಿ ಮನವೋಲಿಸಿದ ದೇವೌಗೌಡರು, ಇತ್ತ ಭೂತಕೋಲ ಪ್ರಶ್ನಿಸಿದ ನಟ ಚೇತನ್ ವಿರುದ್ಧ ದೂರು ದಾಖಲು ಸೇರಿದಂತೆ ಇಡೀ ದಿನದ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಸೇರಿ ಅಂದರ ಅಂಗ ಸಂಘಟನೆಯನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಇದೀಗ ತನಿಖೆ ನಡೆಸುತ್ತಿರುವ ಭಯೋತ್ಪಾದಕ ನಿಗ್ರಹ ದಳ ಸ್ಫೋಟಕ ಮಾಹಿತಿ ಬಯಲು ಮಾಡಿದೆ. ನಿಷೇಧಿತ ಉಗ್ರ ಸಂಘಟನೆ ಪಿಎಫ್ಐ ಆಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ರಾಮ ಮಂದಿರ ಸ್ಫೋಟಿಸಿ ಮತ್ತೆ ಬಾಬ್ರಿ ಮಸೀದಿ ಕಟಲು ಸಂಚು ನಡೆಸಿತ್ತು. ಇಷ್ಟೇ ಅಲ್ಲ ಭಾರತದ ಪ್ರಮುಖ ಸ್ಥಳಗಳಲ್ಲಿ ಗಲಭೆ ನಿರ್ಮಿಸಿ ರಕ್ತಪಾತ ಹರಿಸಲು ಪಿಎಫ್ಐ ನಿರ್ಧರಿಸಿತ್ತು. ಬಂಧಿತ ಉಗ್ರರ ವಿಚಾರಣೆಯಲ್ಲಿ ಈ ಅಂಶಗಳು ಬಯಲಾಗಿದೆ.