ಪಕ್ಷದ ಧ್ವಜ ಹಿಡಿದು ರಾಮ ಮಂದಿರಕ್ಕೆ ಕಾಂಗ್ರೆಸ್ ನಾಯಕರ ಭೇಟಿ, ಪಾರ್ಟಿ ಫ್ಲ್ಯಾಗ್‌ಗೆ ಸ್ಥಳೀಯರ ವಿರೋಧ!
ಮೈಸೂರಿನ ಅರುಣ್ ಯೋಗಿರಾಜ್ ಬಾಲರಾಮನ ವಿಗ್ರಹ ರಾಮ ಮಂದಿರಕ್ಕೆ ಆಯ್ಕೆ, ಅರುಣ್ ಸಾಧನೆಗೆ ಪ್ರಶಂಸೆಗಳ ಸುರಿಮಳೆ, ಪಕ್ಷದ ಧ್ವಜ ಹಿಡಿದು ರಾಮ ಮಂದಿರ ದರ್ಶನ ಮಾಡಿದ ಕಾಂಗ್ರೆಸ್, ಆಯೋಧ್ಯೆಯಲ್ಲಿ ಮಸೀದಿ ಅವಶ್ಯಕತೆ ಇಲ್ಲ, ಈ ಜಮೀನಿನಲ್ಲಿ ಕೃಷಿ ಮಾಡಲಿ ಎಂದ ಇಕ್ಬಾಲ್ ಅನ್ಸಾರಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆಯನ್ನು ಕಾಂಗ್ರೆಸ್ ಬಹಿಷ್ಕರಿಸಿದೆ. ಉತ್ತರ ಪ್ರದೇಶ ಕಾಂಗ್ರೆಸೆ್ ಇಂದು ಆಯೋಧ್ಯೆಗೆ ಭೇಟಿ ನೀಡಿ ರಾಮಲಲ್ಲಾ ದರ್ಶನ ಪಡೆದಿದೆ. ಆದರೆ ರಾಮ ಮಂದಿರಕ್ಕೆ ತೆರಳುವಾಗ ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ತೆರಳಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ರಾಮ ಮಂದಿರ ಉದ್ಘಾಟನೆ ಆಹ್ವಾನ ತಿರಸ್ಕರಿಸಿ, ಇದೀಗ ಧಾರ್ಮಿಕ ಕ್ಷೇತ್ರಕ್ಕೆ ಪಕ್ಷದ ಧ್ವಜ ಹಿಡಿದು ಆಗಮಿಸಿರುವುದೇಕೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಧ್ವಜ ಕಿತ್ತೆಸೆದು ಜಟಾಪಟಿ ನಡೆಸಿದ್ದಾರೆ.