Asianet Suvarna News

ಅಂತ್ಯ ಸಂಸ್ಕಾರ ನಡೆದ ಕೆಲವೇ ದಿನಗಳ ಬಳಿಕ ಅಜ್ಜಿ ಪ್ರತ್ಯಕ್ಷ, ಕುಟುಂಬಕ್ಕೆ ಶಾಕ್!

Jun 3, 2021, 4:42 PM IST

ಅಜ್ಜಿ ಸತ್ತಳೆಂದು ಕುಟುಂಬವೊಂದು ಅಂತ್ಯ ಸಂಸ್ಕಾರ ನಡೆಸಿದೆ. ಆದರೆ ಈ ಅಂತಿಮ ಸಂಸ್ಕಾರ ನಡೆದ ಕೆಲವೇ ದಿನಗಳಲ್ಲಿ ವೃದ್ಧೆ ಮನೆ ಮುಂದೆ ಬಂದು ನಿಂತಿದ್ದಾಳೆ. ಹೌದು ನೆರೆ ರಾಜ್ಯ ಆಂಧ್ರ ಪ್ರದೇಶದಲ್ಲಿ ಇಂತಹುದ್ದೊಂದು ಘಟನೆ ನಡೆದಿದೆ. 

ಮೇ. 12 ರಂದು ಕೃಷ್ಣ ಜಿಲ್ಲೆಯ 75 ವರ್ಷದ ಗಿರಿಜಮ್ಮಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಕೆಲವೇ ದಿನಗಳ ಬಳಿಕ ಅವರ ಬಗ್ಗೆ ವಿಚಾರಿಸಿದಾಗ ಅವರು ಕಾಣೆಯಾಗಿದ್ದಾರೆಂಬ ಮಾಹಿತಿ ನೀಡಲಾಗುತ್ತದೆ. ಅತ್ತ ಶವಾಗಾರದತ್ತ ತೆರಳಿದ ಕುಟುಂಬ ಸದಸ್ಯರಿಗೆ ಅಜ್ಜಿಯನ್ನೇ ಹೋಲುವ ಶವ ಕಂಡಿದೆ. ಅತ್ತ ಗಿರಿಜಮ್ಮನ ಮಗ ರಮೇಶ್ ಕೂಡಾ ಕೊರೋನಾಗೆ ಬಲಿಯಾಗಿದ್ದರು. ಹೀಗಾಗಿ ಕುಟುಂಬ ಸದಸ್ಯರು ಎರಡೂ ಶವಗಳ ಅಂತ್ಯಕ್ರಿಯೆ ಒಂದೇ ದಿನ ನಡೆಸಿದ್ದಾರೆ. 

ಮೊದಲನೇ ಡೋಸ್ ಲಸಿಕೆ ಮಹತ್ವ ತೆರೆದಿಟ್ಟ ಹಿರಿಯ ಅಧಿಕಾರಿ, ಹೊಸ ಗುರಿ

ಆದರೆ ಇತ್ತ ಗಿರಿಜಮ್ಮ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಮನೆಯವರು ಬಂದಿಲ್ಲವೆಂದು ತಾವೇ ನೇರವಾಗಿ ಮನೆಗೆ ಬಂದಿದ್ದಾರೆ. ಇದನ್ನು ಕಂಡ ಮನೆಯವರು ಶಾಕ್ ಆಗಿದ್ದಾರೆ. ಅಂತಿಮವಾಗಿ ಇದೆಲ್ಲವೂ ಆಸ್ಪತ್ರೆಯಿಂದಾದ ಎಡವಟ್ಟು ಎಂದು ತಿಳಿದು ಬಂದಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona