Asianet Suvarna News Asianet Suvarna News

IED found at Ghazipur : ರಾಷ್ಟ್ರ ರಾಜಧಾನಿಯಲ್ಲಿ ಬಾಂಬ್ ಸ್ಫೋಟಕ್ಕೆ ಉಗ್ರರ ಸಂಚು!

ಗಣರಾಜ್ಯೋತ್ಸವ ಗುರಿಯಾಗಿಸಿಕೊಂಡು ಉಗ್ರ ಕೃತ್ಯಕ್ಕೆ ಸಂಚು
ದೆಹಲಿಯ ಗಾಜಿಪುರ್ ಹೂವಿನ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಸ್ಪೋಟಕ ಪತ್ತೆ
ಅಂದಾಜು 1.5 ಕೆಜಿ ಆರ್ ಡಿಎಕ್ಸ್ ನಿಷ್ಕ್ರೀಯ ಮಾಡಿದ ದೆಹಲಿ ಪೊಲೀಸ್

ನವದೆಹಲಿ (ಜ.14): ಗಣರಾಜ್ಯೋತ್ಸವ ಸಂಭ್ರಮಕ್ಕೆ ಇನ್ನೂ 15ಕ್ಕೂ ಕಡಿಮೆ ದಿನಗಳಿರುವ ಹೊತ್ತಿನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ (New Delhi) ಭಯೋತ್ಪಾದಕ ಕೃತ್ಯದ ಆತಂಕ ಶುರುವಾಗಿದೆ. ಶುಕ್ರವಾರ ಬೆಳಗ್ಗೆ ದೆಹಲಿಯ ಗಡಿಗೆ ಹೊಂದಿಕೊಂಡಿರುವ ಉತ್ತರಪ್ರದೇಶದ ಗಾಜಿಪುರ (Ghazipur) ಹೂವಿನ ಮಾರುಕಟ್ಟೆಯಲ್ಲಿ (flower market) ಭಾರೀ ಪ್ರಮಾಣದ ಆರ್ ಡಿಎಕ್ಸ್ ಅನ್ನು(RDX) ಹೊಂದಿದ್ದ ಬ್ಯಾಗ್ ಪತ್ತೆಯಾಗಿದ್ದು, ದೆಹಲಿ ಪೊಲೀಸ್ (Delhi Police)ಯಶಸ್ವಿಯಾಗಿ ನಿಷ್ಕ್ರೀಯಗೊಳಿಸಿದ್ದಾರೆ. ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸಲು ರಾಷ್ಟ್ರ ರಾಜಧಾನಿ ಸಿದ್ಧವಾಗುತ್ತಿದ್ದಂತೆ, ನಗರದ ಭದ್ರತಾ ವ್ಯವಸ್ಥೆಯಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

Terrorist Attack Alert: ನಾಗ್ಪುರದ ಆರೆಸ್ಸೆಸ್‌ ಕಚೇರಿ ಮೇಲೆ ಉಗ್ರರ ಕೆಂಗಣ್ಣು
ಬೆಳಗ್ಗೆ 10.20ರ ವೇಳೆಗೆ ದೆಹಲಿ ಗಡಿಗೆ ತಾಗಿಕೊಂಡಿರುವ ಉತ್ತರ ಪ್ರದೇಶದ ನಗರ ಗಾಜಿಪುರದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿರುವ ಬಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳು ದೂರು ಸ್ವೀಕರಿಸಿದ್ದರು. ಕಪ್ಪು ಬಣ್ಣದ ಬ್ಯಾಕ್ ಪ್ಯಾಕ್ ನಲ್ಲಿ ಅಮೋನಿಯಂ ನೈಟ್ರೇಟ್ ಮಿಶ್ರಣವಿರುವ ಆರ್ ಡಿಎಕ್ಸ್  ಸ್ಫೋಟಕವನ್ನು ಇದರಲ್ಲಿ ಇಡಲಾಗಿತ್ತು. ಮಧ್ಯಾಹ್ನ 1 ಗಂಟೆಯ ವೇಳೆಗೆ ಇದನ್ನು ನಿಷ್ಕ್ರೀಯಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Video Top Stories