ಯಾರಂತೆ ಗೊತ್ತಾ ಮೋದಿ ಅವರ ವಾರಸ್ದಾರ..? ಎದುರಾಳಿಗಳ ಮಾತಿಗೆ ಕೇಸರಿ ಪಡೆಯ ಉತ್ತರವೇನು..?

ಮೋದಿ ಟಾರ್ಗೆಟ್  400 ಸ್ಥಾನ ಗೆಲ್ಲೋದಷ್ಟೇ ಅಲ್ಲ!
ಈಗ ಹುಟ್ಟಿದ ಪ್ರಶ್ನೆಗೆ ಯಾರು ಕೊಡ್ತಾರೆ ಜವಾಬು.?
ಅಷ್ಟು ಜನರಲ್ಲಿ ನಿಜವಾಗೋದು ಯಾರ ಭವಿಷ್ಯ..?

First Published May 25, 2024, 4:20 PM IST | Last Updated May 25, 2024, 4:20 PM IST

ರಾಷ್ಟ್ರ ರಾಜಕಾರಣದಲ್ಲಿ ಮತ್ತೆ ಶುರುವಾಗಿದೆ, ಮೋದಿ ಉತ್ತರಾಧಿಕಾರಿ ಯಾರು ಅನ್ನೋ ಬೃಹತ್ ಪ್ರಶ್ನೆಯ ರಣಬೇಟೆ. ಇನ್ನೂ ಚುನಾವಣೆಯೇ ಮುಗಿದಿಲ್ಲ.. ರಿಸಲ್ಟ್ ಬಂದೇ ಇಲ್ಲ. ಆಗ್ಲೇ, ಪ್ರಧಾನಿ ಪಟ್ಟದ ಬಗ್ಗೆ ಹೊಸ ದಿಕ್ಕಿನಿಂದ ಬಿಸಿಬಿಸಿ ಚರ್ಚೆ ಶುರುವಾಯ್ತಾ ಇದೆ. ಮೋದಿ ಉತ್ತರಾಧಿಕಾರಿ ಯಾರು ಅನ್ನೋ ಪ್ರಶ್ನೆಗೆ ಖುದ್ದು ಮೋದಿ(Narendra Modi) ಅವರೇ ಉತ್ತರ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ತಮ್ಮ ಟಾರ್ಗೆಟ್ ಈ ಲೋಕಸಭೆಯಲ್ಲಿ  400 ಸ್ಥಾನ ಗೆಲ್ಲೋದಷ್ಟೇ ಅಲ್ಲ, ಅದನ್ನೂ ಮೀರಿದ್ದು ಅಂತಿದ್ದಾರೆ. ಬಿಜೆಪಿ(BJP) ಪಾಳಯದಲ್ಲಿ ಒಂದು ಅಘೋಷಿತ, ಅಲಿಖಿತ ನಿಯಮ ಇದೆ. ಅದರ ಪ್ರಕಾರ ಮೋದಿ ಅವರು, 2025ರ ಸೆಪ್ಪಂಬರ್ 17ಕ್ಕೆ, ಅಂದ್ರೆ ಅವರ 75ನೇ ಬರ್ತ್ ಡೇ ದಿನ, ನಿವೃತ್ತರಾಗ್ತಾರೆ. ಈ ಮೂಲಕ, ಮೋದಿ ರಾಜಕೀಯ ಜೀವನದಿಂದ ಹಿಂದೆ ಸರೀತಾರೆ ಅಂತ, ಅರವಿಂದ್ ಕೇಜ್ರಿವಾಲ್(Arvind Kejriwal) ಹೇಳಿದ್ರು. ಸರಿ ಹಾಗಾದ್ರೆ, ಮೋದಿ ಅವರೇನೋ ಪ್ರಧಾನಿ ಪಟ್ಟದಿಂದ ದೂರ ಸರೀತಾರೆ, ಆದ್ರೆ ಅವರ ನಂತರ ಪ್ರಧಾನಿ ಪಟ್ಟ ಯಾರದ್ದಾಗುತ್ತೆ..? ಈ ಪ್ರಶ್ನೆಗೂ ಕೇಜ್ರಿವಾಲರ ಬಳಿ ಒಂದು ಸಿದ್ಧ ಉತ್ತರ ಇದೆ. ಅರವಿಂದ್ ಕೇಜ್ರಿವಾಲರಂತೂ ಇದು ನಿಶ್ಚಿತ ಭವಿಷ್ಯ ಅನ್ನೋ ಹಾಗೆ ಹೇಳಿಕೆ ಕೊಡ್ತಾ ಇದಾರೆ.. ಅಷ್ಟೇ ಅಲ್ಲ, ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ವಾಗ್ಯುದ್ಧವೇ ಆರಂಭವಾಗಿದೆ. ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿರ್ತಾರೆ, ಅವರೇ ದೇಶವನ್ನ ಮುನ್ನಡೆಸ್ತಾರೆ.. ಇದು ಅಮಿತ್ ಶಾ ಹೇಳೋ ಮಾತು. ಅಮಿತ್ ಶಾ(Amit Shah) ಅವರಿಗೆ ಪಟ್ಟ ಕಟ್ಟೋಕೆ ಮೋದಿ ಪ್ರಚಾರ ಮಾಡ್ತಾ ಇದಾರೆ ಅಂತ ಕೇಜ್ರಿವಾಲ್ ಹೇಳಿದ್ರು. ಅಷ್ಟೇ ಅಲ್ಲ, ಅಮಿತ್ ಶಾ ಪ್ರಧಾನಿಯಾದ್ರೆ, ಮೋದಿ ಹೇಳ್ತಿರೋ ಗ್ಯಾರಂಟಿ ಪೂರ್ತಿ ಮಾಡೋದ್ಯಾರು ಅಂತ ಪ್ರಶ್ನೆ ಮಾಡಿದ್ರು.

ಇದನ್ನೂ ವೀಕ್ಷಿಸಿ:  Student Prabuddha Murder: ಅಕ್ಕ ಅಕ್ಕ ಅಂತಿದ್ದವನ್ನೇ ಕೊಂದುಬಿಟ್ಟ..! ಅದು ಆತ್ಮಹತ್ಯೆ ಅಲ್ಲ.. ಬರ್ಬರ ಕೊಲೆ..!