Asianet Suvarna News Asianet Suvarna News

ಚೀನಾ ವಿರುದ್ಧ ಮೋದಿ ತಂತ್ರ, ಮೊದಲ ಹೆಜ್ಜೆ ಇಟ್ಟ ಪ್ರಧಾನಿ

ಜೂ.19ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ| ಭಾರತ- ಚೀನಾ ಗಡಿಯಲ್ಲಿ ಸಂಘರ್ಷದ ಹಿನ್ನೆಲೆಯಲ್ಲಿ ನಡೆಯಲಿರುವ ಸಭೆ| ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಲಿರುವ ಪ್ರಧಾನಿ ಮೋದಿ|

ನವದೆಹಲಿ(ಜೂ.17): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜೂ.19ರಂದು ಸರ್ವ ಪಕ್ಷ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪ್ರಧಾನಿ ಮೋದಿ ಸರ್ವ ಪಕ್ಷ ಸಭೆಯಲ್ಲ ಕರೆದಿದ್ದಾರೆ. ಎಲ್ಲ ಪಕ್ಷಗಳ ನಾಯಕರು ಅಂದು ಸಂಜೆ 5 ಗಂಟೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆಯನ್ನ ನಡೆಸಲಿದ್ದಾರೆ. 

ಚೀನಿ ಸೈನಿಕರ ಸಾವಿನ ಬಗ್ಗೆ ಯಾವುದೇ ಖಚಿತ ಮಾಹಿತಿಯಿಲ್ಲ..!

ಭಾರತ- ಚೀನಾ ಗಡಿಯಲ್ಲಿ ಸಂಘರ್ಷದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಈ ಸರ್ವಪಕ್ಷ ಸಭೆಯನ್ನ ಕರೆದಿದ್ದಾರೆ. ಹೀಗಾಗಿ ಈ ಸಭೆಗೆ ಭಾರೀ ಮಹತ್ವ ಬಂದಿದೆ. ಸಭೆಯಲ್ಲಿ ಯಾವೆಲ್ಲಾ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಾರೆ ಎಂಬುದರ ಕಾದು ನೋಡಬೇಕಿದೆ. 

Video Top Stories