Asianet Suvarna News Asianet Suvarna News

ಆಪ್‌ಗೆ ಮತದಾರನ ಜೈ, ವಿಪಕ್ಷಕ್ಕೆ ಬಿಜೆಪಿ ಸೈ: ಚುನಾವಣೋತ್ತರ ಸಮೀಕ್ಷೆ!

ದೆಹಲಿ ವಿಧಾನಸಭೆ ಚುನಾವಣೆ ಮತದಾನ ಪ್ರಕ್ರಿಯೆ ಅಂತ್ಯ| ಕೇವಲ ಶೇ.54.65ರಷ್ಟು ಮತದಾನ ಎಂದ ಚುನಾವಣಾ ಆಯೋಗ| ಶುರುವಾಯಿತು ಚುನಾವಣೋತ್ತರ ಸಮೀಕ್ಷೆಗಳ ಭರಾಟೆ| ಪ್ರಮುಖ ಸುದದಿವಾಹಿನಿಗಳ ಚುನಾವಣೋತ್ತರ ಸಮೀಕ್ಷೆ ಬಹಿರಂಗ| ಚುನಾವಣೋತ್ತರ ಸಮೀಕ್ಷೆಗಳಲ್ಲಿ ಗೆದ್ದ ಆಮ್ ಆದ್ಮಿ ಪಕ್ಷ| ಮತ್ತೆ ಅಧಿಕಾರದ ಗದ್ದುಗೆ ಏರಲಿದ್ದಾರೆ ಅರವಿಂದ್ ಕೇಜ್ರಿವಾಲ್| ಬಿಜೆಪಿ ಪ್ರಮುಖ ವಿರೋಧ ಪಕ್ಷ ಸ್ಥಾನಕ್ಕೆ ತೃಪ್ತಿ| ಕಾಂಗ್ರೆಸ್ ಅತ್ಯಂತ ಕಳಪೆ ಪ್ರದರ್ಶನ ಎಂದ ಚುನಾವಣೋತ್ತರ ಸಮೀಕ್ಷೆಗಳು| ಫೆ.11(ಮಂಗಳವಾರ)ಕ್ಕೆ ಚುನಾವಣಾ ಆಯೋಗದಿಂದ ಫಲಿತಾಂಶ ಪ್ರಕಟ|

ನವದೆಹಲಿ(ಫೆ.08): ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮತದಾರರ ನಿರಾಸ ಪ್ರಕ್ರಿಯೆ ನಡುವೆಯೇ ರಾಜಕೀಯ ಪಕ್ಷಗಳು ಫೆ.11(ಮಂಗಳವಾರ)ರ ಚುನಾವಣಾ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿವೆ. ಇನ್ನು ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೇ ಚುನಾವಣೋತ್ತರ ಸಮೀಕ್ಷೆಗಳ ಭರಾಟೆ ಶುರುವಾಗಿದ್ದು, ಪ್ರಮುಖ ಸುದ್ದಿವಾಹಿನಿಗಳು ಹಾಗೂ ಸಂಸ್ಥೆಗಳು ದೆಹಲಿ ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿವೆ. ಎಲ್ಲಾ ಪ್ರಮುಖ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರ ಪಡೆಯಲಿದೆ ಎಂದು ಅಂದಾಜಿಸಲಾಗಿದ್ದು, ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಹೇಳಲಾಗಿದೆ.

Video Top Stories