Asianet Suvarna News Asianet Suvarna News

ಕಣ್ಣೆದುರೇ ಸ್ನೇಹಿತನ ಯುದ್ಧವಿಮಾನ ಕ್ರ್ಯಾಶ್‌..ಎರಡು ದಿನದ ಬಳಿಕ ಬರೀ 2 ಕೆಜಿಯ ದೇಹವಷ್ಟೇ ಸಿಕ್ಕಿತ್ತು!

36 ವರ್ಷಗಳ ಕಾಲ ದೇಶ ಸೇವೆ ಮಾಡಿದ ಏರ್‌ ವೈಸ್‌ ಮಾರ್ಷಲ್ ಬೆಳ್ಳಿಗುಂದ ಕೃಷ್ಣಮೂರ್ತಿ ಮುರುಳಿ ಈ ಬಾರಿ ಸಲಾಂ ಸೈನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಈಗ ನೆನಪಿಸಿಕೊಂಡರೆ, ಎಷ್ಟು ಬೇಗ 36 ವರ್ಷ ಕಳೆದೆ ಹೋಯ್ತಲ್ಲ ಎಂದು ನನಗೆ ಅನಿಸಿದೆ ಎಂದು ಹೇಳಿದ್ದಾರೆ.
 

First Published Aug 30, 2022, 6:29 PM IST | Last Updated Aug 30, 2022, 6:29 PM IST

ಬೆಂಗಳೂರು (ಆ. 30): 'ಪಾಲಂನಲ್ಲಿ ಏರ್‌ ಫೋರ್ಸ್‌ ಡೇ.  ಆಗ ನನಗೆ ವಿಶಿಷ್ಠ ಸೇವಾ ಮೆಡಲ್‌ ಸಿಕ್ಕಿತ್ತು. ಪರೇಡ್‌ನಲ್ಲಿ ಏರ್‌ ಚೀಫ್‌ ಮೆಡಲ್‌ಅನ್ನು ಪಿನ್‌ ಮಾಡೋರಿದ್ದರು.  ಅಂದು ನಮ್ಮೆದರು ಏರ್‌ ಡಿಸ್‌ ಪ್ಲೇ ಆಗುತ್ತಿತ್ತು. ಅದನ್ನು ಮಾಡುತ್ತಿದ್ದದ್ದು, ನನ್ನ ಜೊತೆಯಲ್ಲಿದ್ದವನೇ. ಜೋ ಭಕ್ಷಿ ಅಂತಾ ಅವರ ಹೆಸರು. ನಮ್ಮ ಎದುರೇ ಆತನ ಯುದ್ಧ ವಿಮಾನ ಕ್ರ್ಯಾಶ್‌ ಆಗಿತ್ತು. ವಾಟರ್‌ ಟ್ಯಾಂಕ್‌ಗೆ ವಿಮಾನ ಬಡಿದಿತ್ತ..' ಏರ್‌ ವೈಸ್‌ ಮಾರ್ಷಲ್‌ ಬೆಳ್ಳಿಗುಂದ ಕೃಷ್ಣಮೂರ್ತಿ ಮುರಳಿ ತಮ್ಮ ನೆನಪನ್ನು ಹೇಳಿಕೊಳ್ಳುತ್ತಿದ್ದರೆ ಕಣ್ಣಾಲಿಗಳು ತೇವವಾಗುತ್ತಿದ್ದವು.

ಜೋ ಭಕ್ಷಿಯ ಪತ್ನಿ ನಮ್ಮ ಪಕ್ಕದಲ್ಲೇ ಕುಳಿತಿದ್ದರು. ಆಕೆಯ ಎದುರೇ ಜೋ ಭಕ್ಷಿ ಸಾವು ಕಂಡಿದ್ದರು. ಎರಡು ದಿನಗಳ ಬಳಿಕ, ಅವರ 2 ರಿಂದ 3 ಕೆಜಿಯ ದೇಹದ ಭಾಗಗಷ್ಟೇ ಸಿಕ್ಕಿದ್ದವು. ಅವರು ಧರಿಸಿದ್ದ ಚಿಹ್ನೆಯ ಆಧಾರದ ಮೇಲೆ ನಾವು ಇದು ಅವರದೇ ದೇಹ ಎಂದು ಗುರುತಿಸಿದ್ದೆವು.  ಇಂಥ ಸಮಯದಲ್ಲಿ ಸ್ನೇಹಿತನ ಸಾವಿಗಿಂತ ಈ ವಿಚಾರವನ್ನು ಅವರ ಕುಟುಂಬಕ್ಕೆ ಹೇಳುವುದೇ ನಮ್ಮ ದೊಡ್ಡ ಕಷ್ಟವಾಗಿರುತ್ತದೆ ಎಂದು ತಮ್ಮ ಹಳೆಯ ನೆನಪುಗಳ ಬಗ್ಗೆ ಸಲಾಂ ಸೈನಿಕ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

India@75: ತಿರಂಗಾ ಹಿಡ್ಕೊಂಡು ಬನ್ನಿ, ಪಾಯಿಂಟ್‌ 4875ಅಲ್ಲಿ ಹಾರಿಸೋಣ!

36 ವರ್ಷಗಳ ಕಾಲ ಏರ್‌ ಫೋರ್ಸ್‌ನಲ್ಲಿ ಸೇವೆ ಸಲ್ಲಿಸಿದ್ದ ಬಿಕೆ ಮುರಳಿ, ಸೇನೆಯಲ್ಲಿನ ತಮ್ಮ ನೆನಪುಗಳ ಬಗ್ಗೆ ಮಾತನಾಡಿದ್ದಾರೆ. ಏರ್‌ ಫೋರ್ಸ್‌ ಗ್ಲಾಮರಸ್‌ ಆದರೂ, ಅಷ್ಟೇ ಜವಾಬ್ದಾರಿ ಇರುವ ಹುದ್ದೆ ಇದು ಎಂದಿದ್ದಾರೆ.
 

Video Top Stories