Asianet Suvarna News Asianet Suvarna News

82% ಆಸ್ಪತ್ರೆಗಳಲ್ಲಿ ಮಕ್ಕಳ ವೈದ್ಯರೇ ಇಲ್ಲ: ಮೋದಿಗೆ ತಜ್ಞರ ವರದಿ!

ದೇಶಕ್ಕೆ ಕೋವಿಡ್‌ ಮೂರನೇ ಅಲೆ ಅಪ್ಪಳಿಸುವುದು ಸನ್ನಿಹಿತವಾಗಿದೆ. ಅದು ಅಕ್ಟೋಬರ್‌ ವೇಳೆಗೆ ಗರಿಷ್ಠಕ್ಕೆ ತಲುಪಲಿದ್ದು, ವಯಸ್ಕರಷ್ಟೇ ಮಕ್ಕಳು ಕೂಡ ಅಪಾಯಕ್ಕೆ ತುತ್ತಾಗಬಲ್ಲರು. ಆದರೆ, ಮಕ್ಕಳಿಗೆ ಹೆಚ್ಚಿನ ಸೋಂಕು ತಗಲಿದರೆ ಅವರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ವ್ಯವಸ್ಥೆಯ ಸಮೀಪದಲ್ಲೂ ನಾವಿಲ್ಲ. ಶೇ.82ರಷ್ಟುಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ವೈದ್ಯರೇ ಇಲ್ಲ

ನವದೆಹಲಿ(ಆ.24): ದೇಶಕ್ಕೆ ಕೋವಿಡ್‌ ಮೂರನೇ ಅಲೆ ಅಪ್ಪಳಿಸುವುದು ಸನ್ನಿಹಿತವಾಗಿದೆ. ಅದು ಅಕ್ಟೋಬರ್‌ ವೇಳೆಗೆ ಗರಿಷ್ಠಕ್ಕೆ ತಲುಪಲಿದ್ದು, ವಯಸ್ಕರಷ್ಟೇ ಮಕ್ಕಳು ಕೂಡ ಅಪಾಯಕ್ಕೆ ತುತ್ತಾಗಬಲ್ಲರು. ಆದರೆ, ಮಕ್ಕಳಿಗೆ ಹೆಚ್ಚಿನ ಸೋಂಕು ತಗಲಿದರೆ ಅವರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ವ್ಯವಸ್ಥೆಯ ಸಮೀಪದಲ್ಲೂ ನಾವಿಲ್ಲ. ಶೇ.82ರಷ್ಟುಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ವೈದ್ಯರೇ ಇಲ್ಲ. ಹೀಗಾಗಿ ವೈದ್ಯಕೀಯ ಮೂಲಸೌಕರ‍್ಯವನ್ನು ಕೂಡಲೇ ಹೆಚ್ಚಿಸಬೇಕು.

- ಇದು ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (ಎನ್‌ಐಡಿಎಂ)ಯಡಿ ರಚಿಸಿದ್ದ ತಜ್ಞರ ಸಮಿತಿ ಪ್ರಧಾನಿ ಕಾರ್ಯಾಲಯಕ್ಕೆ ಸಲ್ಲಿಸಿರುವ ವರದಿ.

ದೇಶದಲ್ಲಿ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವಷ್ಟುವೈದ್ಯರು, ಸಿಬ್ಬಂದಿ, ವೆಂಟಿಲೇಟರ್‌, ಆ್ಯಂಬುಲೆನ್ಸ್‌ನಂತಹ ಸಲಕರಣೆಗಳು ಇಲ್ಲ. 3ನೇ ಅಲೆಯ ವೇಳೆ ಮಕ್ಕಳಲ್ಲಿ ಹೆಚ್ಚು ಸೋಂಕು ಕಾಣಿಸಿಕೊಂಡರೆ ಆಗ ಚಿಕಿತ್ಸೆ ನೀಡಲು ಬೇಕಾಗುವ ವ್ಯವಸ್ಥೆಯ ಸನಿಹದಲ್ಲೂ ನಾವಿಲ್ಲ. 3ನೇ ಅಲೆಯಲ್ಲಿ ವಯಸ್ಕರಷ್ಟೇ ಪ್ರಮಾಣದಲ್ಲಿ ಮಕ್ಕಳೂ ಸೋಂಕಿಗೆ ತುತ್ತಾಗುವ ಅಪಾಯವಿದೆ. ಹೀಗಾಗಿ ಸಮರೋಪಾದಿಯಲ್ಲಿ ಮಕ್ಕಳ ಚಿಕಿತ್ಸೆಯ ಮೂಲಸೌಕರ್ಯಗಳನ್ನು ರಾಜ್ಯಗಳು ಹೆಚ್ಚಿಸಿಕೊಳ್ಳಬೇಕು. ಪೂರ್ವರೋಗವಿರುವ ಮಕ್ಕಳಿಗೆ ಹಾಗೂ ಅಂಗವಿಕಲರಿಗೆ ಆದ್ಯತೆಯ ಮೇಲೆ ಲಸಿಕೆ ನೀಡಬೇಕು. ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಅಕ್ಟೋಬರ್‌ ವೇಳೆಗೆ ಸೋಂಕು ಗರಿಷ್ಠಕ್ಕೆ ಹೋಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Video Top Stories