Asianet Suvarna News Asianet Suvarna News

ಬಹುಮಹಡಿ ಕಟ್ಟಡ ಕುಸಿತ, 8 ಮಕ್ಕಳು ಸೇರಿ 11 ಸಾವು!

ಮುಂಬೈನ ಮಲಾಡ್​​ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದ್ದು, ಈ ದುರಂತದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಬುಧವಾರ ಸುಮಾರು 9 ಮಂದಿ ಸಾವನ್ನಪ್ಪಿದ್ದು, ಇಂದು, ಗುರುವಾರ ಸಾವಿನ ಸಂಖ್ಯೆ 11ಕ್ಕೇರಿದೆ.  

ಮುಂಬೈ(ಜೂ.10): ಮುಂಬೈನ ಮಲಾಡ್​​ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದ್ದು, ಈ ದುರಂತದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಬುಧವಾರ ಸುಮಾರು 9 ಮಂದಿ ಸಾವನ್ನಪ್ಪಿದ್ದು, ಇಂದು, ಗುರುವಾರ ಸಾವಿನ ಸಂಖ್ಯೆ 11ಕ್ಕೇರಿದೆ.  

 ಮುಂಬೈನ ಪಶ್ಚಿಮ ಮಲಾಡ್​ನ ಮಲ್ವಾನಿ ಪ್ರದೇಶದಲ್ಲಿ ಬುಧವಾರ ರಾತ್ರಿ ಸುಮಾರು 11.10ಕ್ಕೆ ಈ ಘಟನೆ ನಡೆದಿದೆ.  8 ಮಕ್ಕಳು ಸೇರಿದಂತೆ 11 ಜನ ಮೃತಪಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
8 ಮಂದಿಗೆ ಗಂಭೀರಗಾಯಗಳಾಗಿದ್ದು, ಅವರನ್ನು ಬಿಡಿಬಿಎ ಮುನ್ಸಿಪಲ್​ ಜನರಲ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದರ ಬಳಿಯಿರುವ ಇನ್ನೂ ಮೂರು ಕಟ್ಟಡಗಳು ಆತಂಕದ ಪರಿಸ್ಥಿತಿಯಲ್ಲಿದ್ದು, ಅಲ್ಲಿದ್ದ ಎಲ್ಲರನ್ನೂ ಕೂಡಲೇ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ ಎಂದು ಬೃಹತ್ ಮುಂಬೈ ನಗರಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

Video Top Stories