Kodagu: ಕಂದಕಕ್ಕೆ ಬಿದ್ದು ಕಾಲು ಮುರಿದುಕೊಂಡ ಕಾಡಾನೆ; ಚಿಕಿತ್ಸೆಗೆ ಸಿಗುವುದೇ ಸ್ಪಂದನೆ?
ಕಾಡಾನೆಯೊಂದು ಆಹಾರ ಹುಡುಕಿಕೊಂಡು ಬರುವಾಗ ಕಂದಕಕ್ಕೆ ಬಿದ್ದು, ಕಾಲು ಮುರಿದುಕೊಂಡಿದೆ. ಕೊಡಗಿನ ಕಾಫಿತೋಟವೊಂದರಲ್ಲಿ ಬಿದ್ದು ನರಳುತ್ತಿರುವ ಆನೆಯ ಯಾತನೆ ನೋಡಲು ಅಸಾಧ್ಯವಾಗಿದೆ.
ಆ ಮೂಕ ಪ್ರಾಣಿಯ ವೇದನೆ ಕರಳು ಹಿಂಡುವಂತಿದೆ. ಆಕಾರದಲ್ಲು ದೈತ್ಯ ದೇಹಿಯದ್ರೂ ದೇಹಕ್ಕಾಗಿರೋ ಗಾಯ ಆ ಜೀವವನ್ನ ಹಿಂಡಿ ಹಿಪ್ಪೆ ಮಾಡ್ತಾ ಇದೆ. ಹೌದು, ಇದು ಗಣೇಶನ ಸ್ವರೂಪ ಆನೆಯೊಂದರ ಮೂಕ ವೇದನೆ ಕಥೆ.
ಕಾಫಿ ತೋಟದ ಮಧ್ಯೆ ಅಸ್ವಸ್ಥವಾಗಿ ಬಿದ್ದಿರೋ ಕಾಡಾನೆ(wild elephant).. ಕಾಡಲ್ಲಿ ಹಾಯಾಗಿ ಓಡಾಡುತ್ತಿರಬೇಕಾಗಿದ್ದ ಈ ಎಂಟು ವರ್ಷದ ಕಾಡಾನೆ ಹೀಗೆ ಅಸ್ವಸ್ಥವಾಗಿ ಬಿದ್ದು ಒದ್ದಾಡುತ್ತಿದೆ. ಕೊಡಗು(Kodagu) ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮದ ಕಾಫಿತೋಟವೊಂದರಲ್ಲಿ ಈ ಕಾಡಾನೆ ಕುಸಿದು ಬಿದ್ದಿದೆ. ಎರಡು ದಿನಗಳಿಂದ ಮೇಲೇಳಲಾಗದೆ ಈ ಆನೆ ಒದ್ದಾಡುತ್ತಿದೆ. ವಿಷಯವರಿತ ಅರಣ್ಯ ಇಲಾಖೆ(Forest Department) ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಆನೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಮೇಲ್ನೋಟಕ್ಕೆ ದೇಹದಲ್ಲಿ ಯಾವುದೇ ಗಾಯಗಳು ಕಂಡುಬರುತ್ತಿಲ್ಲ. ಬಹುಶಃ ಕಂದಕಕ್ಕೆ ಬಿದ್ದು ಕಾಲು ಮುರಿದುಕೊಂಡಿರುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು.
Kidney Health: ಬರಲಿದೆ ಬೇಸಿಗೆ, ಕಿಡ್ನಿ ಕಾಪಾಡಿಕೊಳ್ಳಿ ಹೀಗೆ...
ಕಾಡಿನಿಂದ ಮೇವು ಮಾಡಲು ಕಾಫಿ ತೋಟ(coffee plantation)ದತ್ತ ಬಂದಿದ್ದ ಈ ಕಾಡಾನೆ ಬಹುಶ ಕಂದಕಕ್ಕೆ ಬಿದ್ದು ಕಾಲು ಮುರಿದುಕೊಂಡಿದೆ. ಮೇಲೇಳಲಾಗದೆ ಆಹಾರ ಸೇವಿಸಲಾಗದೆ ಒದ್ದಾಡುತ್ತಿದೆ. ಆರಂಭದಲ್ಲಿ ಆನೆಗೆ ಏನಾಗಿದೆ ಎಂದು ಅರ್ಥವಾಗದೆ ವೈದ್ಯಾಧಿಕಾರಿಗಳು ಚಿಂತೆಗೀಡಾಗಿದ್ದರು. ಆದ್ರೆ ಸೂಕ್ಷ್ಮಪರಿಶೀಲನೆಯ ಬಳಿಕ ಆನೆಯ ಕಾಲು ಮುರಿದಿರುವ ಲಕ್ಷಣಗಳು ಗೋಚರಿಸುತ್ತಿವೆ. ಸಧ್ಯ ಆನೆಗೆ ಡ್ರಿಪ್ಸ್ ಹಾಕಿ ಅವಲೋಕಿಸಲಾಗುತ್ತಿದೆ. ಆನೆಯನ್ನು ಇಲ್ಲಿಂದ ಸಾಗಿಸಲು ಸಾಧ್ಯವಾಗದೇ ಇರುವುದು ಅರಣ್ಯ ಇಲಾಖೆಯ ಚಿಂತೆಗೆ ಕಾರಣವಾಗಿದೆ. ಆದ್ರೆ ಸದ್ಯ ಇವತ್ತಿನಿಂದ ಆನೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಕೆಲವೇ ದಿನಗಳಲ್ಲಿ ಎದ್ದು ನಿಲ್ಲಲು ಸಾಧ್ಯವಾಗಬಹುದು ಎನ್ನುತ್ತಾರೆ ಅರಣ್ಯಾಧಿಕಾರಿಗಳು.
Women Health : ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತೆ ಈ ಐದು ಕ್ಯಾನ್ಸರ್
ಕಾಡಾನೆಯನ್ನ ಉಳಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನಗಳು ನಡೆದಿವೆ. ಆದ್ರೆ ಕೇವಲ ಡ್ರಿಪ್ಸ್ ಹಾಕುವುದರಿಂದ ಆನೆಗೆ ಬೇಕಾದ ಎನರ್ಜಿ ಸಿಗುತ್ತಿಲ್ಲ. ಹಾಗಾಗಿ ಮುಂದಿನ ಮೂರು ದಿನಗಳು ಆನೆಯ ಪಾಲಿಗೆ ಬಹಳ ಮುಖ್ಯವಾಗಿದೆ. ಕನಿಷ್ಠ ಎದ್ದು ನಿಲ್ಲುವಂತಾದರೆ ಅದಕ್ಕೆ ಬೇಕಾದ ಆಹಾರಗಳನ್ನ ನೀಡಬಹುದು. ಆದ್ರೆ ಎದ್ದು ನಿಲ್ಲದೇ ಹೋದ್ರೆ ಬಹಳ ಕಷ್ಟವಾಗಲಿದೆ. ಹಾಗಾಗಿ ಆನೆ ಎದ್ದು ನಿಲ್ಲುವುದು ಅದರ ಅಳುವು ಉಳಿವಿನ ಪ್ರಶ್ನೆಯಾಗಿದೆ.