ಹಾರ್ಟ್ ಅಟ್ಯಾಕ್: 'ಗೋಲ್ಡನ್ ಅವರ್'ನಲ್ಲಿ ಏನು ಮಾಡಬಹದು?
ಹೃದಯ ಅನ್ನೋದು ಮನುಷ್ಯನ ದೇಹದ ಅವಿಭಾಜ್ಯ ಅಂಗ. ಹೃದಯ ಬಡಿತ ನಿಂತರೆ ಜೀವ ನಿಂತು ಹೋಗುತ್ತೆ. ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಇತ್ತೀಚಿಗೆ ಹೆಚ್ಚಾಗ್ತಿದೆ. ಆದ್ರೆ ಹಠಾತ್ ಹಾರ್ಟ್ ಅಟ್ಯಾಕ್ ಆದಾಗ ಗೋಲ್ಡನ್ ಅವರ್ ಅನ್ನೋದು ತುಂಬಾ ಮುಖ್ಯವಾಗುತ್ತದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ವೃದ್ಧರು ಮಕ್ಕಳು ಅನ್ನೋ ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಹಾರ್ಟ್‌ಅಟ್ಯಾಕ್‌ಗೆ ತುತ್ತಾಗುತ್ತಿದ್ದಾರೆ. ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿ, ವ್ಯಾಯಾಮದ ಕೊರತೆ, ಅಧಿಕ ವ್ಯಾಯಾಮ ಹೀಗೆ ನಾನಾ ಕಾರಣಗಳ ಇರಬಹುದು. ಆದರೆ ನಿರ್ಧಿಷ್ಟವಾಗಿ ಇಂಥಹದ್ದೇ ಕಾರಣ ಎಂದು ಹೇಳುವುದು ಕಷ್ಟ. ಆದರೆ ಹೀಗೆ ಹೃದಯಾಘಾತವಾದಾಗ ಎಲ್ಲರೂ ಗಾಬರಿಯಾಗಿಬಿಡುತ್ತಾರೆ. ತಕ್ಷಣಕ್ಕೇ ಏನು ಮಾಡಬೇಕೆಂದು ಅರ್ಥವಾಗುವುದಿಲ್ಲ. ವ್ಯಕ್ತಿಯೊಬ್ಬರಿಗೆ ಹಾರ್ಟ್ ಅಟ್ಯಾಕ್ ಆದಾಗ ಗೋಲ್ಡನ್ ಅವರ್ ತುಂಬಾ ಮುಖ್ಯವಾಗುತ್ತದೆ. ಈ ಬಗ್ಗೆ ಹೃದ್ರೋಗ ತಜ್ಞ ಡಾ.ಮಹಾಂತೇಶ್ ಆರ್ ಚರಂತಿಮಠ್ ಮಾಹಿತಿ ನೀಡಿದ್ದಾರೆ.
ಪ್ರತಿದಿನ 10000 ಸ್ಟೆಪ್ಸ್ ನಡೆದು ನೋಡಿ… ಮಧುಮೇಹ, ಹೃದಯ ಸಮಸ್ಯೆಗೆ ಬೆಸ್ಟ್ ಪರಿಹಾರ!