Asianet Suvarna News Asianet Suvarna News

ಬೇಕಾದಂತೆ ಮೈ ಬಳುಕಿಸಿ ಯೋಗಾಸನ ಮಾಡ್ತಾನೆ ಬಾಲಕ, ನೋಡುಗರಿಗೆ ಫುಲ್ ಅಚ್ಚರಿ

ಪುಟ್ಟ ಮಕ್ಕಳು ಹಾಗೆಯೇ..ತಮ್ಮ ಸಣ್ಣಪುಟ್ಟ ಚಟುವಟಿಕೆಗಳಿಂದಲೇ ಅಚ್ಚರಿ ಮೂಡಿಸುತ್ತಾರೆ. ಹಾಗೆಯೇ ಇಲ್ಲೊಬ್ಬ ಬಾಲಕ ಅದ್ಭುತವಾಗಿ ದೇಹವನ್ನು ಬೆಂಡ್ ಮಾಡುತ್ತಾ ಯೋಗಾಸನ ಮಾಡಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾನೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

First Published Oct 20, 2022, 2:46 PM IST | Last Updated Oct 20, 2022, 2:46 PM IST

ಯೋಗ ಇಂದು ನಿನ್ನೆಯದಲ್ಲ, ಇದನ್ನು ಸಾವಿರಾರು ವರ್ಷಗಳಿಂದ ಅಭ್ಯಾಸ ಮಾಡಲಾಗುತ್ತಿದೆ. ಯೋಗ ಮಾಡೋದು ದೈಹಿಕ, ಭಾವನಾತ್ಮಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಮನಸ್ಸು ನೆಮ್ಮದಿಯಿಂದ ಕೂಡಿರಲು ನೆರವಾಗುತ್ತದೆ. ಯಾವುದೇ ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಯೋಗಾಸನ ಮಾಡುತ್ತಾರೆ. ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ. ದೈಹಿಕವಾಗಿ ಸದೃಢರಾಗಿರಲು ಹೆಚ್ಚಿನವರು ಅನುಸರಿಸುವ ದಾರಿಯಿದು. ಆದರೆ ಇಲ್ಲೊಬ್ಬ ಬಾಲಕ ಮಾಡುವ ಯೋಗಾಸನ ನೋಡಿದರೆ ಎಂಥವರಿಗೂ ಅಚ್ಚರಿಯಾಗೋದು ಖಂಡಿತ. 

ಸ್ವಿಗ್ಗಿಯಲ್ಲಿ ಸಿಕ್ತು ಅಪ್ಪನಿಗೆ ಕೆಲಸ: ಮಗಳ ಸಂಭ್ರಮ ನೋಡಿ... ವಿಡಿಯೋ ವೈರಲ್

ಪುಟ್ಟ ಬಾಲಕನೊಬ್ಬ ದೇಹವನ್ನು ಸಂಪೂರ್ಣವಾಗಿ ಬೆಂಡ್ ಮಾಡಿ ಯೋಗದ ವಿವಿಧ ಆಸನಗಳನ್ನು ಮಾಡಿ ತೋರಿಸುತ್ತಾನೆ. ಆತ ದೇಹವನ್ನು ಬೆಂಡ್ ಮಾಡುವ ರೀತಿ ಎಂಥವರೂ ಬೆರಗಾಗುವಂತಿದೆ. ಡಾ.ಪ್ರಶಾಂತ್ ಭಾಮರೆ ಎಂಬವರು ಇದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ವೀಡಿಯೋ ವೈರಲ್ ಆಗ್ತಿದೆ. ಬಾಲಕನ ಯೋಗಾಸನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

Video Top Stories