ಥೈರಾಯ್ಡ್‌ ಗುಣಪಡಿಸೋಕೆ ಸರ್ಜರಿ ಮಾಡೋ ಅಗತ್ಯವಿದ್ಯಾ?

ಇತ್ತೀಚಿಗೆ ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ಜನರಲ್ಲಿ ಥೈರಾಯ್ಡ್‌ ಸಮಸ್ಯೆ ಸಾಮಾನ್ಯವಾಗಿದೆ. ಥೈರಾಯ್ಡ್‌ ಸಮಸ್ಯೆಯಿದ್ದಾಗ ಮತ್ತೊಂದಿಷ್ಟು ಆರೋಗ್ಯ ಸಮಸ್ಯೆಗಳು ವಕ್ಕರಿಸಿಕೊಂಡು ಬಿಡ್ತವೆ. ಹೀಗಾಗಿ ಜನರು ಹೇಗಾದ್ರೂ ಗುಣ ಪಡಿಸಿಕೊಳ್ಳೋಣ ಅಂತ ಸರ್ಜರಿ ಮಾಡ್ಕೊಳ್ಳೋಕೆ ಮುಂದಾಗ್ತಾರೆ. ಆದ್ರೆ ಥೈರಾಯ್ಡ್‌ಗೆ ನಿಜಕ್ಕೂ ಸರ್ಜರಿ ಮಾಡೋ ಅಗತ್ಯವಿದ್ಯಾ?

First Published Mar 5, 2024, 5:14 PM IST | Last Updated Mar 5, 2024, 5:14 PM IST

ಪುಟ್ಟದಾದ ಥೈರಾಯ್ಡ್‌ ಗ್ರಂಥಿ ದೇಹದ ಮೇಲೆ ಬೀರುವ ಪ್ರಭಾವ ಅಗಾಧ. ಅದರ ಕಾರ್ಯದಲ್ಲಿ ಚೂರೇ ಚೂರು ಏರುಪೇರಾದರೂ ಸಾಕು, ಆರೋಗ್ಯದಲ್ಲೇ ಏರಿಳಿತವಾಗುತ್ತದೆ. ಥೈರಾಯ್ಡ್‌ ಗ್ರಂಥಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾದರೆ, ಕೆಲವು ಲಕ್ಷಣಗಳು ಸಾಮಾನ್ಯವಾಗಿ ಗೋಚರಿಸುತ್ತವೆ. ಅತಿಯಾದ ಸುಸ್ತು, ತೂಕದಲ್ಲಿ ಏರಿಳಿತ, ಮೂಡಿನಲ್ಲಿ ವ್ಯತ್ಯಾಸ ಇವೆಲ್ಲ ಸಾಮಾನ್ಯ. ಇಂತಹ ಕೆಲವು ಲಕ್ಷಣಗಳ ಮೂಲಕ ಥೈರಾಯ್ಡ್‌ ಗ್ರಂಥಿಯ ಕಾರ್ಯವಿಧಾನದಲ್ಲಿ ಏನಾದರೂ ಸಮಸ್ಯೆ ಉಂಟಾಗಿರುವುದನ್ನು ಊಹಿಸಬಹುದು. 

ಇತ್ತೀಚಿಗಂತೂ ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ಜನರಲ್ಲಿ ಥೈರಾಯ್ಡ್‌ ಸಮಸ್ಯೆ ಸಾಮಾನ್ಯವಾಗಿದೆ. ಥೈರಾಯ್ಡ್‌ ಸಮಸ್ಯೆಯಿದ್ದಾಗ ಮತ್ತೊಂದಿಷ್ಟು ಆರೋಗ್ಯ ಸಮಸ್ಯೆಗಳು ವಕ್ಕರಿಸಿಕೊಂಡು ಬಿಡ್ತವೆ. ಹೀಗಾಗಿ ಜನರು ಹೇಗಾದ್ರೂ ಗುಣ ಪಡಿಸಿಕೊಳ್ಳೋಣ ಅಂತ ಸರ್ಜರಿ ಮಾಡ್ಕೊಳ್ಳೋಕೆ ಮುಂದಾಗ್ತಾರೆ. ಆದ್ರೆ ಥೈರಾಯ್ಡ್‌ಗೆ ನಿಜಕ್ಕೂ ಸರ್ಜರಿ ಮಾಡೋ ಅಗತ್ಯವಿದ್ಯಾ? ತಜ್ಞ ವೈದ್ಯರಾದ ಡಾ.ವಿಶಾಲ್‌ ರಾವ್‌ ಏನಂತಾರೆ ತಿಳಿಯೋಣ.

ಥೈರಾಯ್ಡ್: ಪುರುಷರ ಫರ್ಟಿಲಿಟಿಗೆ ತರುತ್ತಾ ಕುತ್ತು?