ಮೊಬೈಲ್‌ನಿಂದ ಕಣ್ಣು ಹಾಳಾಗ್ಬಾರ್ದು ಅಂದ್ರೆ ಈ ಐದು ವಿಷ್ಯ ತಿಳ್ಕೊಳ್ಳಿ
ರಜೆಯಿದ್ದರೆ ದಿನಪೂರ್ತಿ ಒಂದೇ ಕೆಲ್ಸ. ಬೆಡ್‌ಲ್ಲಿ ಬಿದ್ಕೊಳ್ಳೋದು ಸೋಷಿಯಲ್ ಮೀಡಿಯಾ ಸ್ಕ್ರಾಲ್ ಮಾಡೋದು. ಅದೂ ಬೋರಾಯ್ತು ಅಂದ್ರೆ ಯೂಟ್ಯೂಬ್. ಒಟ್ನಲ್ಲಿ ದಿನಪೂರ್ತಿ ಮೊಬೈಲ್ ನಲ್ಲಿ ಕಳೆದುಬಿಡೋದು. ಬಹುತೇಕರು ಇದನ್ನೇ ಮಾಡ್ತಾರೆ. ಹೀಗೆ ಮಾಡೋದ್ರಿಂದ ಕಣ್ಣು ಹಾಳಾಗುತ್ತೆ. ಹಾಗೆ ಆಗಬಾರದು ಅಂದ್ರೆ ತಜ್ಞ ವೈದ್ಯರಾದ ಡಾ.ಪ್ರಿಯಾಂಕ್ ಸೋಲಂಕಿ ಏನಂತಾರೆ ತಿಳ್ಕೊಳ್ಳಿ.
ಮೊಬೈಲ್ ಎಂಬುದು ಇವತ್ತಿನ ದಿನಗಳಲ್ಲಿ ಸಾರ್ವತ್ರಿಕವಾಗಿಬಿಟ್ಟಿದೆ. ಮೊಬೈಲ್ ಇಲ್ಲದೆ ಮನುಷ್ಯನ ಬದುಕೇ ಇಲ್ಲ ಎಂಬಷ್ಟು ಅನಿವಾರ್ಯವಾಗಿಬಿಟ್ಟಿದೆ. ಮೊಬೈಲ್ ಬಂದ ನಂತರ ಆನ್‌ಲೈನ್ ಪೇಮೆಂಟ್, ಮೇಲ್ ಮೊದಲಾದ ಪ್ರಯೋಜನಗಳಾದರೂ ಇದು ಇದಕ್ಕಿಂತ ಹೆಚ್ಚಾಗಿ ಕೆಟ್ಟದಕ್ಕೆ ಕಾರಣವಾಗುತ್ತಿದೆ. ಇವತ್ತಿನ ಯುವಜನತೆಯಂತೂ ದಿನಪೂರ್ತಿ ಮೊಬೈಲಿನಲ್ಲೇ ಮುಳುಗಿರುತ್ತಾರೆ. ಮೊಬೈಲ್ ಫೋನ್ ಹೆಚ್ಚು ಬಳಸುವ ಬಹುತೇಕ ಯುವಕ-ಯುವತಿಯರ ಕಣ್ಣುಗಳು ನಿರಂತರವಾಗಿ ಒಣಗುತ್ತಿರುವುದು ಅಧ್ಯಯನದ ವೇಳೆ ಕಂಡು ಬಂದಿದೆ. ನೀವು ಕೂಡಾ ಇದೇ ರೀತಿ ವಿಪರೀತ ಮೊಬೈಲ್ ಬಳಸ್ತೀರಾ. ಹಾಗಿದ್ರೆ ಈ ಐದು ವಿಷ್ಯ ತಿಳ್ಕೊಂಡಿರೋದು ಒಳ್ಳೆಯದು.
Digital Eye Strain: ಕಣ್ಣುಗಳನ್ನು ರಕ್ಷಿಸಲು ಇಲ್ಲಿವೆ ಸಿಂಪಲ್ ಟಿಪ್ಸ್